ETV Bharat / state

ಮೈಸೂರು: ಗನ್‌ಹೌಸ್ ಬಳಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಗೆ ರಾಜಮಾತೆ ಆಕ್ಷೇಪ - ಅರಸು ಮಂಡಳಿ

ಮೈಸೂರಿನ ಗನ್​ ಹೌಸ್​ ವೃತ್ತದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

rajamata-pramoda-devi-objects-to-shivaratri-rajendra-swamiji-statue-near-gunhouse-mysuru
ಮೈಸೂರು: ಗನ್‌ಹೌಸ್ ಬಳಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಗೆ ರಾಜಮಾತೆ ಆಕ್ಷೇಪ
author img

By ETV Bharat Karnataka Team

Published : Dec 9, 2023, 9:57 PM IST

ಅರಸು ಮಂಡಳಿ ಪದಾಧಿಕಾರಿ ಅಮರನಾಥ ರಾಜೇ ಅರಸ್ ಹೇಳಿಕೆ

ಮೈಸೂರು : ಗನ್ ಹೌಸ್ ವೃತ್ತದಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವುದಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್​​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮೈಸೂರಿನ ಗನ್ ಹೌಸ್​ ಬಳಿ ತಡರಾತ್ರಿ ಕ್ರೇನ್​ ಉಪಯೋಗಿಸಿ ಪ್ರತಿಮೆಯನ್ನು ಸ್ಥಾಪಿಸಲು ಮುಂದಾಗಿರುವ ವಿಷಯ ಅತ್ಯಂತ ದುರದೃಷ್ಟ ಸಂಗತಿ. ಪ್ರಬುದ್ಧ ಸಂಸ್ಥೆಯಿಂದ ಇಂತಹ ಕೆಲಸ ಸಮಂಜಸವಲ್ಲ. ಉದ್ದೇಶಿತ ಪ್ರತಿಮೆಗೆ ಸತತವಾಗಿ ವಿರೋಧ ತೋರಿದ ಸಾರ್ವಜನಿಕರಿಗೆ ಸ್ಪಂದಿಸಿ, ಈ ಬಗ್ಗೆ ಪುನರ್ ವಿಮರ್ಶೆ ಮಾಡಲು ಮನವಿ ಕೂಡ ತಲುಪಿಸಿ ನನ್ನ ಬೆಂಬಲ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ನಗರದ ಗನ್​ ಹೌಸ್​ ಬಳಿಯ ವೃತ್ತದಲ್ಲಿ ರಾತ್ರೋರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆಯನ್ನಿಟ್ಟು ಶ್ರೀಗಳಿಗೆ ಅಪಮಾನಿಸಲಾಗಿದೆ. ಹೀಗಾಗಿ ಇದರ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಅರಸು ಮಂಡಳಿ ತಿಳಿಸಿದೆ. ಈ ಕುರಿತು ಶನಿವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಮಂಡಳಿ ಪದಾಧಿಕಾರಿ ಅಮರನಾಥ ರಾಜೇ ಅರಸ್, ಮೈಸೂರು ಅರಮನೆ ಗನ್ ಹೌಸ್ ಬಳಿ ರಾತ್ರಿ ವೇಳೆ ಪ್ರತಿಮೆ ಇಟ್ಟಿದ್ದಾರೆ. ಶಿವರಾತ್ರಿ ಸ್ವಾಮೀಜಿ ಅವರ ಪುತ್ಥಳಿಯನ್ನು ರಾತ್ರಿಯ ವೇಳೆ ಕದ್ದು ಇರಿಸುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ. ಇದು ಜೆಎಸ್ಎಸ್ ಸಂಸ್ಥೆಗೆ ಮಾಡಿದ ಅಪಮಾನ ಎಂದು ಹೇಳಿದರು.

ಪ್ರತಿಮೆ ಸ್ಥಾಪನೆಗೆ ಯಾವುದೇ ಸ್ಪಷ್ಟ ದಾಖಲಾತಿ ಇಲ್ಲ. ಮೈಸೂರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಈ ವೃತ್ತದಲ್ಲಿ ಶ್ರೀಕಂಠದತ್ತ ಒಡೆಯರ್​ ಪ್ರತಿಮೆ ನಿರ್ಮಾಣ ಮಾಡಬೇಕು. ರಾಜಮನೆತನದವರ ಪುತ್ಥಳಿ ಇರಿಸಲು ಸಾಧ್ಯವಾಗದಿದ್ದರೆ ಚಾಮುಂಡೇಶ್ವರಿ ಮೂರ್ತಿ ಇರಿಸಬೇಕು. ಬದಲಾಗಿ ಯಾವುದೋ ಒಂದು ಸಮಿತಿ ಸೇರಿಕೊಂಡು ಪುತ್ಥಳಿ ಇರಿಸುವುದನ್ನು ನಾವು ವಿರೋಧಿಸುತ್ತೇವೆ ಎಂದರು.

ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿಲ್ಲ. ಮಠ ಬೆಳೆದಿರುವುದು ಅರಮನೆಯಿಂದ ಹೊರತು ಮಠದಿಂದ ಅರಮನೆ ಬೆಳೆದಿಲ್ಲ. ಕೋರ್ಟ್ ಆದೇಶ ಬಂದಲ್ಲಿ ಯಾವುದೇ ಪುತ್ಥಳಿ ನಿರ್ಮಾಣಕ್ಕೆ ನಾವು ಒಪ್ಪಿಗೆ ಸೂಚಿಸುತ್ತೇವೆ. ಇಈ ವೇಳೆ ಶ್ರೀಧರ್​ ರಾಜ್ ಅರಸು ಮತ್ತು ಜೈದೇವ್ ಅರಸು, ಶ್ರೀಕಾಂತ್ ರಾಜ್ ಅರಸು ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಡಿ.​ 13ರಂದು ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.