ETV Bharat / state

ಜನವರಿ 9ಕ್ಕೆ ರೈಲ್‌ ಬಂದ್‌ ಚಳವಳಿ ಮಾಡುತ್ತೇವೆ: ವಾಟಾಳ್ ಘೋಷಣೆ

ಮರಾಠ ಪ್ರಾಧಿಕಾರ ಬೇಡ ಅಂತ ಹೇಳಿ ರಾಜ್ಯಾದ್ಯಂತ ಈಗಾಗಲೇ ಬಂದ್ ಮಾಡಲಾಗಿದೆ. ಆದರೂ ಸರ್ಕಾರ‌ ಪ್ರಾಧಿಕಾರವನ್ನ ವಾಪಸ್‌ ಪಡೆಯಲಿಲ್ಲ. ಹೀಗಾಗಿ ಜನವರಿ 9ರಂದು ಇಡೀ ಕರ್ನಾಟಕದ್ಯಾಂತ ರೈಲು‌ ಸೇವೆ ‌ಬಂದ್‌ ಆಗಲಿದೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
author img

By

Published : Dec 22, 2020, 3:13 PM IST

ಮೈಸೂರು: ಜನವರಿ‌ 9 ರಂದು ರಾಜ್ಯದಲ್ಲಿ‌ ಎರಡನೇ ‌ಹಂತದ ಚಳವಳಿಯನ್ನ ಆರಂಭ ಮಾಡಲಿದ್ದೇವೆ. ಕರ್ನಾಟಕದ ಎಲ್ಲ ‌ಕಡೆ ರೈಲು ಸೇವೆಯನ್ನು ಬಂದ್‌ ಮಾಡಲಾಗುವುದು ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್

ಇಂದು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ‌ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಮರಾಠ ಪ್ರಾಧಿಕಾರ ಬೇಡ ಅಂತ ಹೇಳಿ ರಾಜ್ಯಾದ್ಯಂತ ಈಗಾಗಲೇ ಬಂದ್ ಮಾಡಲಾಗಿದೆ. ಆದರೂ ಸರ್ಕಾರ‌ ಪ್ರಾಧಿಕಾರವನ್ನ ವಾಪಸ್‌ ಪಡೆಯಲಿಲ್ಲ. ಇದರಿಂದ ಎರಡನೇ ‌ಹಂತದ ಚಳವಳಿಯನ್ನು ಇಡೀ ರಾಜ್ಯಾದ್ಯಂತ ಆರಂಭ ಮಾಡಲಿದ್ದು, ಜನವರಿ 9ರಂದು ಇಡೀ ಕರ್ನಾಟಕದ್ಯಾಂತ ರೈಲು‌ ಸೇವೆ ‌ಬಂದ್‌ ಆಗಲಿದೆ.‌ ಕನ್ನಡಪರ ಸಂಘಟನೆಗಳಿಂದ‌‌ ರೈಲ್ವೆ‌ ಹಳಿಯ ಮೇಲೆ ಕುಳಿತು ಹೋರಾಟ ಮಾಡಲಾಗುತ್ತದೆ. ಎರಡನೇ ‌ಬಾರಿ‌ ಎಚ್ಚರಿಕೆ ನೀಡುತ್ತೇವೆ, ಮರಾಠ ಪ್ರಾಧಿಕಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತೇವೆ ಎಂದರು.

ಓದಿ:ಚಿತ್ರದುರ್ಗ: ಮದುವೆಗೂ ಮುನ್ನ ಮತ ಮರೆಯದ ಮದುಮಗಳು

ಮುಖ್ಯಮಂತ್ರಿಗಳು‌ ಸರಿಯಾದ ಆಡಳಿತ ನಡೆಸುತ್ತಿಲ್ಲ. ಒಂಥರ ಗೂಂಡಾಗಿರಿ ಹಾಗೂ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದಾರೆ. ದ್ವೇಷದ ರಾಜಕಾರಣವನ್ನು ನಡೆಸುತ್ತಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಜನವರಿ 26ರ ಒಳಗೆ ತುಮಕೂರಿನ ದಿವಂಗತ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.