ಮೈಸೂರು: ಹೆತ್ತ ತಾಯಿಯನ್ನು ನಂಬಲಾಗದ ಸ್ಥಿತಿಗೆ ರಾಹುಲ್ ಗಾಂಧಿ ತಲುಪಿದ್ದಾರೆ. ಸೈನಿಕರ ಹನಿ ರಕ್ತಕ್ಕು ಬಡ್ಡಿ ಸಮೇತವಾಗಿ ಸರ್ಜಿಕಲ್ ಹಾಗೂ ಇನ್ನಿತರ ದಾಳಿ ಮೂಲಕ ಪಾಕಿಸ್ತಾನ ಹಾಗೂ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿದ ಸೈನಿಕರನ್ನು ಕಾಂಗ್ರೆಸ್ ಅನುಮಾನದಿಂದ ನೋಡುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕುಟುಕಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಇವಿಎಂ ನಂಬಲ್ಲ, ಸೈನಿಕರ ದಾಳಿ ನಡೆಸಿದ್ದಾರೆ ಎಂದರೂ ಅನುಮಾನ ವ್ಯಕ್ತಪಡಿಸುತ್ತಾರೆ. ಇವರು ಯಾವ ದೇಶ ನಾಯಕರು ಎಂಬುದು ಗೊತ್ತಾಗುತ್ತಿಲ್ಲ ಎಂದು ಟಾಂಗ್ ನೀಡಿದರು.
ಟಿಪ್ಪು ಬಗ್ಗೆ ಮೈಸೂರು ರಂಗಾಯಣ ನಿರ್ದೇಶಕರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಟಿಪ್ಪು ಮತಾಂಧ, ಕೊಡವರ ಮೇಲೆ ದೌರ್ಜನ್ಯ ನಡೆಸಿರುವುದು ಸತ್ಯ. ಮಲಬಾರಿಗಳ ಮೇಲೆ ಟಿಪ್ಪು ಹಾಗೂ ಆತನ ಸೈನಿಕರು ಅತ್ಯಾಚಾರ ಮಾಡಿರುವುದು ಸತ್ಯ. ಬ್ರಿಟಿಷರ ವಿರುದ್ಧ ಹೋರಾಡಿರುವುದು ಸತ್ಯ ಎಂದು ಸಮರ್ಥಿಸಿಕೊಂಡರು.