ETV Bharat / state

ಈ ಚುನಾವಣೆ ನಿಮ್ಮ ಮಕ್ಕಳ ಭವಿಷ್ಯ ಹಾಗೂ ಸಂಸ್ಕೃತಿ ರಕ್ಷಿಸುವ ಚುನಾವಣೆ: ಪ್ರಿಯಾಂಕಾ ಗಾಂಧಿ - karnataka assembly election 2023

ಚುನಾವಣಾ ಪ್ರಚಾರದ ನಿಮಿತ್ತ ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಂದು ಮೈಸೂರು ಜಿಲ್ಲೆಯ ಟಿ.ನರಸೀಪುರ ಬಳಿ ಯಳವರಹುಂಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.

priyanka-gandhi-lashed-out-at-the-state-bjp-government
ಈ ಚುನಾವಣೆ ನಿಮ್ಮ ಮಕ್ಕಳ ಭವಿಷ್ಯ ಹಾಗೂ ಸಂಸ್ಕೃತಿ ರಕ್ಷಿಸುವ ಚುನಾವಣೆ: ಪ್ರಿಯಾಂಕಾ ಗಾಂಧಿ
author img

By

Published : Apr 25, 2023, 6:32 PM IST

ಮೈಸೂರು: ಈ ಬಾರಿಯ ಚುನಾವಣೆ ಕರ್ನಾಟಕದ ನಿಮ್ಮ ಅಭಿಮಾನದ ಚುನಾವಣೆ, ಬಿಜೆಪಿ ಸರ್ಕಾರ ಎಲ್ಲಾ ಕಡೆ ಲೂಟಿ ಮಾಡಿ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಚುನಾವಣೆ ನಿಮ್ಮ ಮಕ್ಕಳ ಹಾಗೂ ನಿಮ್ಮ ಸಂಸ್ಕೃತಿಯನ್ನು ರಕ್ಷಿಸುವ ಚುನಾವಣೆ ಆಗಿದೆ. ಈ ಬಾರಿ ಜನರ ಹಿತ ಬಯಸುವ ಸರ್ಕಾರ ತನ್ನಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

ಮೊದಲ ಬಾರಿಗೆ ರಾಜ್ಯ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ, ಮೈಸೂರು ಜಿಲ್ಲೆಯ ಟಿ.ನರಸೀಪುರ ಬಳಿ ಯಳವರಹುಂಡಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿಯವರು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆ. ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನೀಡಲಿಲ್ಲ. ರೈತರ ಸಾಲಮನ್ನಾ ಮಾಡಲಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಲೂಟಿ ಮಾಡುವುದರಲ್ಲಿ ಕಾರ್ಯನಿತರತರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಬಾರಿ ಚುನಾವಣೆ ಕರ್ನಾಟಕದ ಅಭಿಮಾನದ ಸಂಕೇತವಾಗಿದ್ದು. ಇದು ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಹಾಗೂ ಸಂಸ್ಕೃತಿಯ ರಕ್ಷಣೆಯ ದೃಷ್ಠಿಯಿಂದ ಮುಖ್ಯವಾದ ಚುನಾವಣೆ ಆಗಿದೆ. ಲೂಟಿ ಮಾಡುವ ಸರ್ಕಾರ ತೆಗೆದು, ಜನರ ಹಿತ ಬಯಸುವ ಸರ್ಕಾರ ತನ್ನಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ರು.

40 ಪರ್ಸೆಂಟ್​​ ಸರ್ಕಾರ: ಬಿಜೆಪಿ ಸರ್ಕಾರ ರಚನೆಯಾದ ದಿನದಿಂದ ಜನರ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಜನರ ವಿಶ್ವಾಸವನ್ನು ಗಳಿಸಲಿಲ್ಲ, ಪ್ರತಿ ದಿನ ಲೂಟಿ ಮಾಡಿ 40 ಪರ್ಸೆಂಟ್​​​ ಸರ್ಕಾರ ಎಂಬ ಹೆಸರು ಪಡೆದಿದ್ದು, ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡು ಪ್ರಧಾನಿಗೆ ಪತ್ರ ಬರೆದರು ಸಮಸ್ಯೆ ಬಗೆಹರಿಯಲಿಲ್ಲ. ಪಿಎಸ್​​ಐ ಹಗರಣದಲ್ಲಿ ಬಿಜೆಪಿ ನಾಯಕರು ಇದ್ದರು ಯಾರನ್ನು ಬಂಧಿಸಲಿಲ್ಲ.

ಕೋವಿಡ್​​ ಸಮಯದಲ್ಲಿ ಸರ್ಕಾರ ಹಣವನ್ನೇ ಲೂಟಿ ಮಾಡಿದ್ದು, ಯಾವ ಭರವಸೆಯನ್ನು ಈಡೇರಿಸಲಿಲ್ಲ. ಪ್ರತಿದಿನ ಸುಳ್ಳನ್ನು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ, ಕೆಎಂಎಫ್ ನಂದಿನಿಯನ್ನ ಅಮುಲ್ ಜೊತೆ ವಿಲೀನ ಮಾಡಲು ಸಂಚು ಮಾಡುತ್ತಿದ್ದು. ಕರ್ನಾಟಕದ ಕ್ಷೀರ ಭಾಗ್ಯವನ್ನ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆ ರಾಜ್ಯದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಭಾಗ್ಯಗಳನ್ನು ತಮ್ಮ ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ ವಿವರಿಸಿದರು.

ಆರು ದಿನಗಳ ಕಾಲ ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಚುನಾವಣೆಯಲ್ಲಿ ಆರು ದಿನಗಳಲ್ಲಿ ಸುಮಾರು 15 ಸಾರ್ವಜನಿಕ ಸಭೆ, ರ‍್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರು ಏಪ್ರಿಲ್ 28, ಏಪ್ರಿಲ್ 29, ಮೇ 3, ಮೇ 4, ಮೇ 6 ಮತ್ತು ಮೇ 7 ರಂದು ಬಿರುಸಿನ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ನಾಳೆ ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಸುದೀಪ್ ಪ್ರಚಾರ: ಐದು ಕ್ಷೇತ್ರಗಳಲ್ಲಿ ಹೆಬ್ಬುಲಿ ರೋಡ್ ಶೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.