ETV Bharat / state

ಪ್ರತಾಪಸಿಂಹ ಸೇವೆಯ ಅಂಕಪಟ್ಟಿಯನ್ನು ಜನತೆ ಮುಂದಿಡಬೇಕು: ತನ್ವೀರ್ ಸೇಠ್

author img

By

Published : Jun 6, 2022, 6:13 AM IST

ಧರಂಸಿಂಗ್ ಅವಧಿಯಲ್ಲಿ ಮೈಸೂರು ಏರ್ ಪೋರ್ಟ್ ನಿರ್ಮಾಣಕ್ಕೆ ಹವಾಮಾನ ಇಲಾಖೆ ಜೊತೆ ಸಹಿ ಹಾಕಿದ್ದು ನಾನು. ನಾನು ನಾನು ಎನ್ನುವ ಮನೆ ಯಾವತ್ತು ಖಾಲಿ. ಜನ ನಿನ್ನ 8 ವರ್ಷ ಗೆಲ್ಲಿಸಿದ್ದರಲ್ಲಾ ನಿರೀಕ್ಷೆಗೆ ತಕ್ಕ ಹಾಗೆ ಏನ್ ಕೆಲಸ ಮಾಡಿದಿಯಾ? ಎಂದು ಪ್ರತಾಪ್ ಸಿಂಹ ಅವರನ್ನು ಶಾಸಕ ತನ್ವೀರ್ ಸೇಠ್ ತರಾಟೆಗೆ ತೆಗೆದುಕೊಂಡಿದ್ದಾರೆ.

prathap-simha-have-to-present-his-service-sheet-to-people-says-thanveer-seth
ಪ್ರತಾಪಸಿಂಹ ಸೇವೆಯ ಅಂಕಪಟ್ಟಿ ಜನತೆ ಮುಂದಿಡಬೇಕು: ತನ್ವೀರ್ ಸೇಠ್

ಮೈಸೂರು : ಸಂಸದ ಪ್ರತಾಪ್ ಸಿಂಹ ತಮ್ಮ ಸೇವೆಯ ಅಂಕಪಟ್ಟಿಯನ್ನು ಜನತೆ ಮುಂದಿಡಬೇಕು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾತಿಗೆ ಮುನ್ನ ಬೆಂಗಳೂರು - ಮೈಸೂರು ಹೆದ್ದಾರಿ ಅಭಿವೃದ್ಧಿ ಮಾಡಿದೆ ಎಂದು ಹೇಳುತ್ತಾರೆ. ಪ್ರತಾಪಸಿಂಹ ವ್ಯಾಪ್ತಿಗೆ ಬರೋದು ಕೇವಲ ಮೂರು ಕಿ.ಮಿ. ಅಷ್ಟೆ.

ಹಾಗಾದರೆ, ಮಂಡ್ಯ ಸಂಸದೆ ಸುಮಲತಾ, ಬೆಂಗಳೂರು ಗ್ರಾಮಾಂತರ, ನಗರ ಸಂಸದರು ಏನು ಮಾಡೇ ಇಲ್ವೇ? ಹೀಗಾಗಿ ಪ್ರತಾಪಿಸಿಂಹ ವಿರುದ್ದ ಮಾತನಾಡಿ ಕೆಸರನ್ನು ಮೈಮೇಲೆ ಎರಚಿಕೊಳ್ಳಲ್ಲ ಎಂದು ಹೇಳಿದರು. ಧರಂಸಿಂಗ್ ಅವಧಿಯಲ್ಲಿ ಮೈಸೂರು ಏರ್ ಪೋರ್ಟ್ ನಿರ್ಮಾಣಕ್ಕೆ ಹವಾಮಾನ ಇಲಾಖೆ ಜೊತೆ ಸಹಿ ಹಾಕಿದ್ದು ನಾನು. ನಾನು ನಾನು ಎನ್ನುವ ಮನೆ ಯಾವತ್ತು ಖಾಲಿ. ಜನ ನಿನ್ನ 8 ವರ್ಷ ಗೆಲ್ಲಿಸಿದ್ದರಲ್ಲಾ ನಿರೀಕ್ಷೆ ತಕ್ಕ ಏನ್ ಕೆಲಸ ಮಾಡಿದ್ಯಾ? ಎಂದು ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದರು.

ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ತನ್ವೀರ್ ಸೇಠ್

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದದ ವಿಚಾರವಾಗಿ ಮಾತನಾಡಿ, ಜಾಮೀಯಾ ಮಸೀದಿ ಜಾಗ ವಕ್ಫ್ ಬೋರ್ಡ್ ಸೇರಿದ್ದು. ಇತ್ತೀಚೆಗೆ ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ಮಸೀದಿ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ವಕ್ಫ್ ಬೋರ್ಡ್ ಹಾಗೂ ಪುರಾತತ್ವ ಇಲಾಖೆ ಸಭೆ ಕರೆಯುವಂತೆ ಮನವಿ ಮಾಡಿದ್ದೇನೆ. ಸಭೆ ಮೂಲಕ ಕುಳಿತು ಚರ್ಚೆ ಮಾಡಬೇಕು. ಸರ್ಕಾರ ಮೌನ ತಾಳಿದ್ದಲ್ಲಿ ಇಂತಹ ವಿವಾದಗಳಿಗೆ ಪುಷ್ಟಿ ಕೊಟ್ಟಂತಾಗುತ್ತದೆ ಎಂದು ಹೇಳಿದರು.

ರಾಜಕಾರಣದಲ್ಲಿ ನಾನು ಇದ್ದರೆ ಕಾಂಗ್ರೆಸ್ ನಲ್ಲಿ ಮಾತ್ರ : ಜೆಡಿಎಸ್ ನಿಂದ ಎನ್ ಆರ್ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿರುವ ವಿಚಾರವಾಗಿ ಮಾತನಾಡಿ, ಚುನಾವಣೆ ಅಂದರೆ ಪೈಪೋಟಿ. ಪ್ರತಿ ಬಾರಿಯೂ ಎನ್ಆರ್ ಗುರಿ ಮಾಡಲಾಗುತ್ತೆ. ರಾಜಕಾರಣ ನಿಂತ ನೀರಲ್ಲ, ಇಲ್ಲಿ ಇರುವವರು ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಇದ್ದವರು ಇಲ್ಲಿಗೆ ಬರುತ್ತಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯಲ್ಲ. ಕಾಂಗ್ರೆಸ್ ನನಗೆ ಕೊಟ್ಟಿರುವ ಕೊಡುಗೆಗಾಗಿ ಕಾಂಗ್ರೆಸ್ ಋಣ ತೀರಿಸಬೇಕಿದೆ. ರಾಜಕಾರಣದಲ್ಲಿ ನಾನು ಇದ್ದರೆ ಕಾಂಗ್ರೆಸ್ ನಲ್ಲಿ ಮಾತ್ರ. ನಮ್ಮ ತಂದೆ ನನಗೆ ಹೇಳಿದ್ರು ಕಾಂಗ್ರೆಸ್ಸಿಗನಾಗಿ ಸಾಯಬೇಕು ಎಂದು. ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಯೋಗ ಯಾವ ಪಕ್ಷಕ್ಕೂ ಸೇರಿಲ್ಲ. ಮೈಸೂರು ಕೂಡ ಯಾರ ಸ್ವತ್ತಲ್ಲ. ಇತಿಹಾಸದ ಪುಟದಲ್ಲಿ ಹೆಸರು ಸೇರಬೇಕಾದರೆ ನಿಮ್ಮ ಕೊಡುಗೆ ಏನು ಅಂತ ಹೇಳಬೇಕು. ಏನೂ ಅಭಿವೃದ್ದಿ ಮಾಡದೇ ಹೇಗೆ ಇತಿಹಾಸದ ಪುಟ ಸೇರುತ್ತದೆ. ನನಗೆ ಆರೋಗ್ಯದ ಕಾರಣದಿಂದ ಬಗ್ಗುವುದಕ್ಕೆ ಆಗುವುದಿಲ್ಲ ಎಂದು ನನ್ನ ಯೋಗ ಸಮಿತಿಗೆ ಸೇರಿಸಿಕೊಂಡಿಲ್ಲ ಎಂದು ಹೇಳಿದರು.

ಪಠ್ಯ ಪರಿಷ್ಕರಣೆಯಲ್ಲಿ ರಾಜಕಾರಣ ಬೇಡ : ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ವಿಸರ್ಜನೆ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿಗಳು ಒಂದೆಡೆ ಸಮಿತಿ ವಿಸರ್ಜಿಸಿದ್ದೇವೆ ಎನ್ನುತ್ತಾರೆ. ಮತ್ತೊಂದೆಡೆ ಪಠ್ಯ ಪರಿಷ್ಕರಣೆ ಮುಗಿದಿದೆ ಎಂದು ನಮ್ಮ ಉದ್ದೇಶ ಈಡೇರಿದೆ ಎನ್ನುತ್ತಾರೆ. ಇದರಿಂದ ಸರ್ಕಾರದ ಉದ್ದೇಶ ಏನೆಂಬುದು ಅರ್ಥವಾಗುತ್ತದೆ.

ಇದು ರಾಜಕಾರಣಿಗಳು, ಸ್ವಯಂ ಶಿಕ್ಷಣ ತಜ್ಞರು ಮಾಡುವ ತೀರ್ಮಾನವಲ್ಲ. ಪಠ್ಯ ಪರಿಷ್ಕರಣೆಯಲ್ಲಿ ರಾಜಕಾರಣ ಬೇಡ. ಮಕ್ಕಳ ವಯೋಮಿತಿಗೆ ತಕ್ಕಂತೆ ಜ್ಙಾನೋದಯವಾಗುವ ಪಠ್ಯ ಕೊಡಬೇಕು. ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರದ ಕೈವಾಡ ಇರಬಾರದು ಎಂದು ಹೇಳಿದರು. ಸಿಬಿಎಸ್ಇಗೆ ಸಮೀಪವಾದ ಶಿಕ್ಷಣ ಕೊಡಬೇಕು ಎಂದು ಎನ್​ಸಿಇಆರ್​ಟಿ ಪಠ್ಯ ತಂದೆ. ಬಸವಣ್ಣ, ಅಂಬೇಡ್ಕರ್ ನಾರಾಯಣಗುರು ಇವರಿಗೆಲ್ಲಾ ಅವಮಾನ ಮಾಡುವುದು ಎಷ್ಟು ಸರಿ. ಈ ವರ್ಗಗಳ ಭಾವನೆಗಳನ್ನು ಕೆಣಕಿ ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತೀರ?.ಸರ್ಕಾರವನ್ನು ನಡೆಸುವುದಾರೆ ನಡೆಸಿ, ಇಲ್ಲವೇ ವಿಸರ್ಜಿಸಿ ಎಂದರು.

ರೋಹಿತ್ ಚಕ್ರತೀರ್ಥರನ್ನು ರಕ್ಷಣೆ ಮಾಡಿದ್ದೆ ಕಾಂಗ್ರೆಸ್ ಎಂಬ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಮಿತ್ ಶಾಗೆ ರಕ್ಷಣೆ ಕೊಟ್ಟಿದ್ದೆ ಅಹ್ಮದ್ ಪಟೇಲ್ ಅಂತಾರೆ ನಿಜವೇ? ರೋಹಿತ್ ಚಕ್ರತೀರ್ಥನಿಗೂ ನಮಗೂ ಏನ್ ಸಂಬಂಧ. ವ್ಯಕ್ತಿಗತವಾಗಿ ದ್ವೇಷ ಇಟ್ಟುಕೊಂಡು ನಾವು ವಿರೋಧಿಸುತ್ತಿಲ್ಲ. ಅವರು ಮಾಡಿರುವ ತಪ್ಪಿನ ಬಗ್ಗೆ ಹೇಳುತ್ತಿದ್ದೇವೆ ಎಂದು ಹೇಳಿದರು.

ಜೆಡಿಎಸ್ ನವರು ಮನ್ಸೂರ್ ಅಲಿಖಾನ್​​ ಅನ್ನು ಬೆಂಬಲಿಸಲಿ : ಮುಸ್ಲಿಂ ಮೇಲೆ ಪ್ರೀತಿ ಇದ್ದರೆ ಮನ್ಸೂರ್ ಅಲಿಖಾನ್ ಮೊದಲ ಅಭ್ಯರ್ಥಿ ಮಾಡಬೇಕಿತ್ತು ಎಂಬ ಸಿಎಂ ಇಬ್ರಾಹಿಂ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರ ಮನೆ ದೋಸೆ ತೂತೆ, ಇಷ್ಟೆಲ್ಲಾ ಮಾತನಾಡುವ ಇಬ್ರಾಹಿಂ ಎಂಎಲ್ಸಿಗೆ ರಾಜೀನಾಮೆ ಕೊಟ್ಟಾಗ ಯಾರಿಗೆ ಲಾಭ ಆಯ್ತು?.ಇವರ ರಾಜೀನಾಮೆಯಿಂದ ಅಂದು ಬಿಜೆಪಿಗೆ ಅನುಕೂಲ ಆಯ್ತು. ಹೆಚ್.ಡಿ.ದೇವೆಗೌಡರು ಸೋತಾಗ ನಮಗೆ ತುಂಬಾ ನೋವಾಯ್ತು. ಸೋನಿಯಾಗಾಂಧಿ ಸೂಚನೆ ಮೇರೆಗೆ ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಈಗ ಜೆಡಿಎಸ್ ನವರು ಮನ್ಸೂರ್ ಅಲಿಖಾನ್ ನ್ನು ಬೆಂಬಲಿಸಲಿ. ಆಗ ಜೆಡಿಎಸ್ ಬದ್ಧತೆ ಏನು ಅಂತ ಗೊತ್ತಾಗುತ್ತೆ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.

ಓದಿ : ಗದಗದಲ್ಲಿ ಸರ್ಕಾರಿ ಜಾಗ ಒತ್ತುವರಿ.. ನೋಟಿಸ್​ಗೆ​ ಬಗ್ಗದವರ ಕಟ್ಟಡದ ಮೇಲೆ ಜೆಸಿಬಿ ಸವಾರಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.