ETV Bharat / state

11 ವರ್ಷದ ಪ್ರೇಮ ಪ್ರಕರಣಕ್ಕೆ ಪೊಲೀಸರಿಂದ ಸುಖಾಂತ್ಯ!

author img

By

Published : May 13, 2019, 5:08 PM IST

ಪ್ರೀತಿಸಿ ಸಂಸಾರ ನಡೆಸಿ ಯುವತಿಯನ್ನು ಗರ್ಭಿಣಿಯನ್ನಾಗಿಸಿ ಬಳಿಕ ವಿವಾಹವಾಗಲು ನಿರಾಕರಿಸಿದ ಯುವಕನನ್ನು ಪೊಲೀಸರು ಮನವೊಲಿಸಿ ವಿವಾಹ ಮಾಡಿಸಿರುವ ಘಟನೆ ಟಿ.‌ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಸರಳ ವಿವಾಹ ಮಾಡಿಸಿದ ಪೊಲೀಸರು

ಮೈಸೂರು: ಪ್ರೀತಿಸಿ ಸಂಸಾರ ನಡೆಸಿ ಬಳಿಕ ವಿವಾಹವಾಗಲು ನಿರಾಕರಿಸಿದ ಯುವಕನನ್ನು ಪೊಲೀಸರು ಮನವೊಲಿಸಿ ವಿವಾಹ ಮಾಡಿಸಿರುವ ಘಟನೆ ಟಿ.‌ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಕಳೆದ 11 ವರ್ಷಗಳ ಹಿಂದೆ ಟಿ.‌ನರಸೀಪುರ ತಾಲೂಕಿನ ಎಸ್.‌ಮೇಗಡಹಳ್ಳಿ ಗ್ರಾಮದ ಗೀತಾ ಎನ್ನುವ ಯುವತಿಗೆ ಅದೇ ತಾಲೂಕಿನ ಕಟ್ಟೆಗಣನೂರು ಗ್ರಾಮದ ಚಿನ್ನಸ್ವಾಮಿ ಎಂಬ ಕೇಬಲ್ ಆಪರೇಟರ್ ಜೊತೆ ಪರಿಚಯವಾಗಿದೆ. ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿದೆ. ಮದುವೆ ಆಗದಿದ್ದರು ಇವರಿಬ್ಬರು ಸಂಸಾರ ನಡೆಸುತ್ತಿದ್ದು, ಪರಿಣಾಮ ಯುವತಿ ಗರ್ಭಿಣಿ ಆಗಿದ್ದಳು.

ಇಷ್ಟೆಲ್ಲ ಆದ ಬಳಿಕ ಚಿನ್ನಸ್ವಾಮಿ ವಿವಾಹವಾಗುವುದಿಲ್ಲವೆಂದು ನಿರಾಕರಿಸಿದ್ದಾನೆ. ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಟಿ. ನರಸೀಪುರ ಠಾಣೆಯಲ್ಲಿ ಯುವಕನ ವಿರುದ್ಧ ವಂಚನೆಯ ದೂರು ದಾಖಲಿಸಿದ್ದರು. ಈ ಸಂಬಂಧ ಟಿ.‌ನರಸೀಪುರ ಠಾಣೆಯ ಪೊಲೀಸರು ಎರಡೂ ಕುಟುಂಬದವರನ್ನು ಕರೆಸಿ ಮನವೊಲಿಸಿ‌ ದೇವಾಲಯದಲ್ಲಿ ಸರಳ ವಿವಾಹ ಮಾಡಿಸಿ 11 ವರ್ಷದ ಪ್ರೇಮ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.

Intro:ಮೈಸೂರು: ಪ್ರೀತಿಸಿ ಸಂಸಾರ ನಡೆಸಿದರು ವಿವಾಹವಾಗಲು ನಿರಾಕರಿಸಿದ ಯುವಕನನ್ನು ಪೋಲಿಸ್ ಠಾಣೆಯಲ್ಲಿ ಮನವೋಲಿಸಿ ಸರಳ ವಿವಾಹ ಮಾಡಿಸಿದ ಘಟನೆ ಟಿ.‌ನರಸೀಪುರ ಪಟ್ಟಣದಲ್ಲಿ ನಡೆದಿದೆBody:ಮಿಸ್ ಕಾಲ್ ಮೂಲಕ ೧೧ ವರ್ಷಗಳ ಹಿಂದೆ ಪರಿಚಯವಾದ ಟಿ.‌ನರಸೀಪುರ ತಾಲ್ಲೂಕಿನ ಎಸ್.‌ಮೇಗಡಹಳ್ಳಿ ಗ್ರಾಮದ ಗೀತಾ ಎಂಬುವ ಯುವತಿಯೊಂದಿಗೆ ಅದೇ ತಾಲ್ಲೂಕಿನ ಕಟ್ಟೆಗಣನೂರು ಗ್ರಾಮದ ಚಿನ್ನಸ್ವಾಮಿ ಎಂಬ ಕೇಬಲ್ ಆಪರೇಟರ್ ಈಕೆಯನ್ನು ಮದುವೆಯಾಗುವುದಾಗಿ ಪ್ರೀತಿ ನಾಟಕವಾಡಿ ೧೧ ವರ್ಷಗಳ ಮದುವೆ ಯಾಗುವುದಾಗಿ ವಂಚಿಸುತ್ತ ಈಕೆ ಗರ್ಭಿಣಿಯಾದಾಗ ನಾನು ಮದುವೆಯಾಗುವುದಿಲ್ಲ ಎಂದು ತಿರಸ್ಕರಿಸಿದ ಕೊನೆಗೆ ಯುವತಿ ಈತನಿಂದ ಬೇಸಗೊಂಡು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.

ಕೊನೆಗೆ ಈಕೆಯ ಕುಟುಂಬಸ್ಥರು ಈಕೆಯನ್ನು ಮನವೊಲಿಸಿ‌ ಟಿ. ನರಸೀಪುರ ಠಾಣೆಯಲ್ಲಿ ವಂಚನೆಯ ದೂರು ದಾಖಲಿಸಿದ್ದು ಈ ಸಂಬಂಧ ಟಿ.‌ನರಸೀಪುರ ಠಾಣೆಯ ಪೋಲಿಸರು ೨ ಕುಟುಂಬದವರನ್ನು ಕರೆಸಿ ಇಬ್ಬರನ್ನು ಮನವೊಲಿಸಿ‌ ಠಾಣೆಯ ಸಮೀಪದಲ್ಲಿದ್ದ ಶ್ರೀ‌ಗಣಪತಿ ದೇವಾಲಯದಲ್ಲಿ ಸರಳ ವಿವಾಹ ಮಾಡಿಸಿ ೧೧ ವರ್ಷದ ಪ್ರೇಮ ಪ್ರಕರಣಕ್ಕೆ ಸುಖಾಂತ್ಯ ಮಾಡಿದರು.Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.