ETV Bharat / state

ಮುಂದಿನ ಚುನಾವಣೆಯಲ್ಲಿ ಜನರಿಂದ ನಿಮಗೆ ತಕ್ಕ ಪಾಠ: ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್ ವಾಗ್ದಾಳಿ

ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಮೈಸೂರಿನಲ್ಲಿ ಟೀಕಾಸಮರ ನಡೆಸಿದರು.

Laxman rant against Pratap Simha
ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್
author img

By

Published : Jun 20, 2023, 4:17 PM IST

ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಹೇಳಿಕೆ

ಮೈಸೂರು: ''ನಿಮ್ಮ ಬಂಡವಾಳ, ನೀವು ಮಾಡಿರುವ ಅಕ್ರಮಗಳು ನಮಗೂ ನಮಗೂ ಗೊತ್ತಿದೆ. ಜನರಿಗೂ ಕೂಡ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಉತ್ತರ ಕಲಿಸಲಿದ್ದಾರೆ'' ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಸದ ಪ್ರತಾಪ್ ಸಿಂಹ ಅವರು, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಸಚಿವ ಎಚ್.ಸಿ. ಮಹಾದೇವಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಂದು ಸಂಸದರ ಹೇಳಿಕೆಗೆ ಲಕ್ಷ್ಮಣ್ ಅವರು ತಿರುಗೇಟು ನೀಡಿದರು. ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ ಪಟಾಲಂನ ಅಧ್ಯಕ್ಷ ಪ್ರತಾಪ್ ಸಿಂಹ, ಕಾರ್ಯದರ್ಶಿ ಸಿ.ಟಿ. ರವಿ ಆಗಿದ್ದು, ನಿಮ್ಮ ಯೋಗ್ಯತೆಗೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದೀರಿ. ಜನರಿಗೆ ನಿಮ್ಮ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ನಿಮಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಪ್ರತಾಪ್ ಸಿಂಹ ರಾಜ್ಯದ ಸಮಸ್ಯೆ ಕುರಿತು ಸಂಸತ್​ನಲ್ಲಿ ಎಷ್ಟು ದಿನ ಮಾತನಾಡಿದ್ದೀರಿ ಎಂದು ಪ್ರಶ್ನಿಸಿದರು.

''ನೀವು ಸಿಎಂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರೆ ದೊಡ್ಡ ಮನುಷ್ಯ ಆಗುತ್ತೇನೆ ಎಂದುಕೊಂಡಿದ್ದೀರಿ. ನಿಮ್ಮ ಬಂಡವಾಳ ನಮಗೂ ಹಾಗೂ ಜನರಿಗೂ ಗೊತ್ತಾಗಿದೆ. ನೀವು ಮಾಡಿರುವ ಅಕ್ರಮಗಳು ನಮ್ಮ ಗಮನಕ್ಕೂ ಬಂದಿದೆ. ಮೈಸೂರು ದಶಪಥ ಕಾಮಗಾರಿಯಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದೀರಿ ಎಂಬುದು ಗೊತ್ತು. ಕೊಡಗಿನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಿ ಎನ್ನುವುದು ನಮಗೂ ಗೊತ್ತಿದೆ ಎಂದು ಲಕ್ಷ್ಮಣ್ ಕಿಡಿಕಾರಿದರು.

''ಡಿ.ಕೆ. ಶಿವಕುಮಾರ್ ಬಗ್ಗೆ ಪ್ರೀತಿ ವಿಶ್ವಾಸ ಇದ್ದಿದ್ದರೆ ಅವರನ್ನು ಏಕೆ ಜೈಲಿಗೆ ಹಾಕಿಸಿದ್ದೀರಿ. ಅವಾಗ ನಿಮಗೆ ಒಕ್ಕಲಿಗರ ಬಗ್ಗೆ ಇದ್ದ ಅಭಿಮಾನ ಎಲ್ಲಿ ಹೋಗಿತ್ತು'' ಎಂದು ಸಂಸದರನ್ನು ಪ್ರಶ್ನಿಸಿದರು.

ಇದನ್ನೂ ಓದಿ: ಬಿ ಎಲ್ ಸಂತೋಷ್ ಬಗ್ಗೆ ಮಾತನಾಡಿದರೆ ಬ್ರಾಹ್ಮಣ ಸಮುದಾಯವನ್ನು ಬೈದಂತೆ ಅಲ್ಲ: ಪ್ರತಾಪ್​ ಸಿಂಹಗೆ ಸಚಿವ ಎಂ ಬಿ ಪಾಟೀಲ್‌ ತಿರುಗೇಟು

ಬಹಿರಂಗ ಚರ್ಚೆಗೆ ಆಹ್ವಾನ: ''ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ನೀವು ಹೇಳಿದ ಕಡೆ ಸಭೆ ಮಾಡೋಣ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅವರನ್ನು ನಾನು ಕರೆದುಕೊಂಡು ಬರುತ್ತೇನೆ. ಮೈಸೂರಿನ ಏರ್​ಪೋರ್ಟ್ ಅಭಿವೃದ್ಧಿಗೆ ಏನೆಲ್ಲ ಯೋಜನೆ ತಂದಿದ್ದೀರಿ. ನಮ್ಮಿಂದ ಏನು ಆಗಬೇಕು ಎಂಬ ಬಗ್ಗೆ ಚರ್ಚೆ ಮಾಡೋಣ. ಅದನ್ನು ಬಿಟ್ಟು, ಕೆಳ ಹಂತದ ಅಧಿಕಾರಿಗಳ ಸಭೆ ಚರ್ಚೆ ಮಾಡುವುದಲ್ಲ. ನೀವು ಏರ್​ಪೋರ್ಟ್ ಮಾಡಲಿಲ್ಲ. ರೈಲ್ವೆ ಟರ್ಮಿನಲ್ ಮಾಡಲಿಲ್ಲ. ನೀವು ಮಾಡಿರುವ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಸ್ಥಳ ನಿಗದಿ ಮಾಡಿ ಎಂದು ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರು.

ಇದನ್ನೂ ಓದಿ: ಐಐಟಿ ಮುಂಬೈಗೆ 315 ಕೋಟಿ ದೇಣಿಗೆ ಕೊಟ್ಟ ಕನ್ನಡಿಗ ನಂದನ್ ನಿಲೇಕಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.