ಮೈಸೂರು: ರಾಜ್ಯದ ಮುಖ್ಯಮಂತ್ರಿ ವೇದಿಕೆ ಮೇಲೆ ಇರುವಾಗ ಗಂಡಸ್ತನದ ಬಗ್ಗೆ ಮಾತನಾಡಿರುವುದು ಬಿಜೆಪಿ ಪಕ್ಷದ ನೀಚ ಸಂಸ್ಕೃತಿಯನ್ನು ಜನರಿಗೆ ತೋರಿಸಿದೆ ಎಂದು ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತಿ.ನರಸೀಪುರದಲ್ಲಿ ರಾಮನಗರದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಮತ್ತು ಸಂಸದ ಡಿಕೆ ಸುರೇಶ್ ನಡುವೆ ನಡೆದಿದ್ದ ಮಾತಿನ ಚಕಮಕಿಯ ಬಗ್ಗೆೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತನ್ನದೇ ಆದ ಸಿದ್ದಾಂತವನನ್ನು ಹೊಂದಿರುವ ಮತ್ತು ಸ್ವಾಂತ್ರಂತ್ರ್ಯಕ್ಕೋಸ್ಕರ ಹೋರಾಡಿದಂತಹ ಪಕ್ಷ ಕಾಂಗ್ರೆಸ್. ರಾಮನಗರದಲ್ಲಿ ಮೊದಲು ಪ್ರಚೋದನೆ ಮಾಡಿದ್ದು ಬಿಜೆಪಿ. ವೇಧಿಕೆಯಲ್ಲಿ ಒಬ್ಬರು ಸಚಿವರು ಮುಖ್ಯಮಂತ್ರಿಗಳ ಮುಂದೆ ಆಡಬಾರದಂತಹ ಮಾತುಗಳನ್ನಾಡಿದ್ದಾರೆ. ಗಂಡಸ್ತನದ ಬಗ್ಗೆ ಮಾತನಾಡುವ ಮೂಲಕ ಬಿಜೆಪಿ ತನ್ನ ನೀಚ ಸಂಸ್ಕೃತಿಯನ್ನು ತೋರಿಸಿದೆ. ಅವರದು ಸಾಮಾಜಿಕ ವಿರುದ್ಧ ನೀತಿ, ಆರ್ಎಸ್ಎಸ್ ಸಂಸ್ಕೃತಿ ಮತ್ತು ಅನ್ಕಲ್ಚರಲ್ ಸಂಸ್ಕೃತಿ, ಚರ್ಚ್ಗಳಿಗೆ ಹೋಗಿ ದಾಳಿ ಮಾಡುವುದು, ಗಂಡು ಹೆಣ್ಣು ಹೊಟ್ಟಿಗೆ ಇದ್ದರೆ ಜಗಳ ಮಾಡುವುದು ಅವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಚಿವರಾಗಿ ನಮ್ಮ ಪಕ್ಷದ ಸಂಸದರ ಬಗ್ಗೆ ಅಸಭ್ಯವಾಗಿ ಮಾತನಾಡಿದಾಗ ನಾವು ಸುಮ್ಮನಿರಬೇಕೆ. ಹಾಗಾಗಿ ನಾವು ಯಾರನ್ನು ಕ್ಷಮೆ ಕೇಳುವ ಅವಶ್ಯಕತೆ ಇಲ್ಲ.ಕಾಂಗ್ರೆಸ್ ಪಕ್ಷ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದೆ. ನಿಜಕ್ಕೂ ಅವರ ಹಾಡಿರುವ ಮಾತುಗಳಿಗೆ ನಾವು ಪ್ರತಿಭಟನೆ ಮಾಡಬೇಕು, ಅವರಲ್ಲ ಎಂದು ಯತೀಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಭವನಕ್ಕೆ ಮುತ್ತಿಗೆ