ಮೈಸೂರು: ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ಸರ್ವೇ ಕಾರ್ಯದಲ್ಲಿ ಗ್ರಾಮಸ್ಥರೊಬ್ಬರು ಕೊಡೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪಿಡಿಒ ಸ್ಪಷ್ಟನೆ ನೀಡಿದ್ದಾರೆ.
'ಭೂಮಿ ಸರ್ವೇ ಕಾರ್ಯ ನಡೆಯುತ್ತಿರುವಾಗ ಉಪಕರಣಗಳಿಗೆ ಬಿಸಿಲು ಬೀಳಬಾರದು ಎಂದು ಕೊಡೆ ತರಿಸಿದ್ದೆವು. ಕೊಡೆ ಹಿಡಿದ ಜಾಗದಲ್ಲಿ ನಾನು ಬಂದು ನಿಂತಿದ್ದೆ. ಇದು ಉದ್ದೇಶಪೂರ್ವಕ ಅಲ್ಲ. ಆಕಸ್ಮಿಕವಾಗಿ ಕೊಡೆಯ ಕೆಳಗೆ ನಿಂತಿದ್ದಾಗ ಕಿಡಿಗೇಡಿಗಳು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಈ ರೀತಿ ವೈರಲ್ ಮಾಡಿರುವುದು ನನಗೆ ಮತ್ತು ಕುಟುಂಬದವರಿಗೆ ಮಾನಸಿಕವಾಗಿ ನೋವಾಗಿದೆ. ನಾನು ಸಹ ರೈತನ ಮಗಳು. ನಾನು ಜಮೀನಿನಲ್ಲಿ ಕೆಲಸ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.