ಮೈಸೂರು: ಕೊರೊನಾ ಸೋಂಕು ದಿನೆ ದಿನೇ ಉಲ್ಬಣಗೊಳ್ಳುತ್ತಿರುವುದರಿಂದ, ಕಾರ್ಖಾನೆ ಬಂದ್ ಮಾಡುವಂತೆ ಆದೇಶಿಸಿದ್ದರೂ ಗಾರ್ಮೆಂಟ್ಸ್ ಮಾಲೀಕ ಮಾತ್ರ ನೌಕರರನ್ನು ಕೆಲಸ ಬರುವಂತೆ ಹೇಳಿದ್ದಾರೆ ಎನ್ನಲಾಗಿದೆ.
ನರಸೀಪುರ ತಾಲೂಕಿನ ಚೌಹಳ್ಳಿ ಗ್ರಾಮದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ ಹಾಗೂ ಇತರೆ ಕಾರ್ಖಾನೆಯನ್ನ ಮೇ 5 ರಿಂದ ಮೇ 22ರ ತನಕ ಬಂದ್ ಮಾಡುವಂತೆ ತಾಲೂಕು ಆಡಳಿತ ಆದೇಶ ನೀಡಿದೆ. ಅಲ್ಲದೇ ಕಾರ್ಖಾನೆ ಮಾಲೀಕರಿಗೆ ನೋಟಿಸ್ ನೀಡಿದೆ. ನೋಟಿಸ್ ನೀಡಿದರು ಮಾಲೀಕರು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
![ಕಾರ್ಖಾನೆ ಬಂದ್ ಮಾಡುವಂತೆ ಆದೇಶ](https://etvbharatimages.akamaized.net/etvbharat/prod-images/kn-mys-03-garments-vis-ka10003_07052021125624_0705f_1620372384_533.jpg)
ಎಂದಿನಂತೆ ಕಾರ್ಖಾನೆ ಕೆಲಸಕ್ಕೆ ನೌಕರರು ಹಾಜರಾಗುತ್ತಿದ್ದಾರೆ. ಸಾರ್ವಜನಿಕರ ವಿರೋಧದ ನಡುವೆಯು ಮಾಲೀಕ ಗಾರ್ಮೆಂಟ್ಸ್ ತೆರೆದಿದ್ದಾರೆ. ಗಾರ್ಮೆಂಟ್ಸ್ ಮಾಲೀಕನ ಮೊಂಡಾಟಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.