ETV Bharat / state

ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್ ಚೀತಾ ಸಾರ್ವಜನಿಕರ ವೀಕ್ಷಣೆಗೆ ಮುಕ್ತ - Opportunity to watch Africa Cheetah

ಮೈಸೂರು ಮೃಗಾಲಯದಲ್ಲಿ ಆಫ್ರಿಕನ್ ಚೀತಾ ವೀಕ್ಷಣೆಗೆ ಸಚಿವ ಎಸ್.ಟಿ.ಸೋಮಶೇಖರ್ ಇಂದು ಚಾಲನೆ ನೀಡಿದರು.

Opportunity to watch Africa Cheetah
ಮೈಸೂರು ಮೃಗಾಲಯದಲ್ಲಿ ಆಫ್ರಿಕನ್ ಚೀತಾ ವೀಕ್ಷಣೆಗೆ ಮುಕ್ತ..
author img

By

Published : Oct 15, 2020, 12:30 PM IST

ಮೈಸೂರು: ಇಲ್ಲಿನ ಮೃಗಾಲಯಕ್ಕೆ ಆಫ್ರಿಕಾದಿಂದ ತರಲಾಗಿರುವ 3 ಚೀತಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಮೈಸೂರು ಮೃಗಾಲಯದಲ್ಲಿ ಆಫ್ರಿಕನ್ ಚೀತಾ ವೀಕ್ಷಣೆಗೆ ಮುಕ್ತ

ನಂತರ ಮತನಾಡಿದ ಅವರು, ಮೈಸೂರು ಮೃಗಾಲಯಕ್ಕೆ ಮೂರು ಹೊಸ ಚೀತಾ ತರಲಾಗಿದೆ. ಇಂತಹ ಚೀತಾಗಳು ದೇಶದಲ್ಲಿ ಹೈದರಾಬಾದ್ ಬಿಟ್ಟರೆ ಮೈಸೂರಿನಲ್ಲಿ ಮಾತ್ರ ಇದೆ. ಆ. 17ರಂದು ಪ್ರಾಣಿ ವಿನಿಮಯ ಯೋಜನೆಯಡಿ ದಕ್ಷಿಣ ಆಫ್ರಿಕಾದಿಂದ ಒಂದು ಗಂಡು, ಎರಡು ಹೆಣ್ಣು ಚೀತಾಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ ಎಂದು ಸಚಿವರು ತಿಳಿಸಿದರು.

ಇನ್ನು ದಸರಾವನ್ನು ಸರಳವಾಗಿ ಆಚರಿಸಲಾಗುವುದು. ನಾಳೆ ಮೈಸೂರಿಗೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಜಿಲ್ಲಾಡಾಳಿತದಿಂದ ಈಗಾಗಲೇ ಎಲ್ಲ ಸಿದ್ಧತೆಗಳು ಆಗಿವೆ. ಶನಿವಾರ ಮುಖ್ಯಮಂತ್ರಿಗಳು ನಾಡಹಬ್ಬ ದಸರಾಗೆ ಚಾಲನೆ ನೀಡಲಿದ್ದಾರೆ ಎಂದರು.

ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಹೇರಲಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ತಂಡ ನೀಡಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕ ನಿರ್ಬಂಧ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಸಚಿವರು ತಿಳಿಸಿದರು.

ರಾಜರಾಜೇಶ್ವರಿ ನಗರ ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿಗಳಾದ ಮುನಿರತ್ನ ಅವರ ನಾಮಪತ್ರ ಸಲ್ಲಿಕೆ ವೇಳೆ ನಾನು ಉಪಸ್ಥಿತನಿದ್ದೆ. ಚುನಾವಣೆಯಲ್ಲಿ ಅವರು 30ರಿಂದ 40 ಸಾವಿರ ಲೀಡ್​​ನೊಂದಿಗೆ ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನನಗೆ ದಸರಾ ಇರುವುದರಿಂದ ಎಲ್ಲಾ ಸಮಯದಲ್ಲೂ ಅಲ್ಲಿ ಇರಲು ಆಗುತ್ತಿಲ್ಲ. ರಾಜರಾಜೇಶ್ವರಿ ನಗರ ಸಹ ನನ್ನ ಕ್ಷೇತ್ರದ ಪಕ್ಕವೇ ಇರುವುದರಿಂದ ಗೆಲುವಿಗೆ ಇನ್ನಷ್ಟು ಹೆಚ್ಚಿಗೆ ಕೆಲಸ ಮಾಡಬಹುದಾಗಿದೆ ಎಂದು ಸಚಿವರು ಹೇಳಿದರು.

ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಸಿಗಲು ನಾನು ಸಹ ಬಹಳಷ್ಟು ಪ್ರಯತ್ನ ಪಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಗೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.