ಮೈಸೂರು: ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಒಬ್ಬ ಸಾವನ್ನಪ್ಪಿದ್ದು,ಮತ್ತೊಬ್ಬನಿಗೆ ತೀವ್ರ ಗಾಯವಾಗಿರುವ ಘಟನೆ ಮೈಸೂರಿನ ಟಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ನಡೆದಿದೆ.
ಮೈಸೂರಿನಿಂದ ಕೊಳ್ಳೇಗಾಲಕ್ಕೆ ಇವರ ಹೊರಟಿದ್ದರು ಎನ್ನಲಾಗಿದೆ. ಟಿ.ನರಸೀಪುರ ಬಳಿಯ ತೂಗುದೀಪ ದರ್ಶನ್ ಫಾರಂ ತಿರುವಿನ ರಸ್ತೆಯಲ್ಲಿ ವೇಗವಾಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ.
![ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು, One death in car accident in T narasipura of Mysore](https://etvbharatimages.akamaized.net/etvbharat/prod-images/kn-mys-5-accident-news-7208092_20122019155201_2012f_1576837321_1022.jpg)
ಪರಿಣಾಮ ಸ್ಥಳದಲ್ಲೇ ನಾಗರಾಜ್ ಭಟ್ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮತ್ತೊಬ್ಬನಿಗೆ ತೀವ್ರ ಗಾಯವಾಗಿದೆ. ಆತನನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.