ETV Bharat / state

ಮೈಸೂರಲ್ಲಿ ಓಮಿಕ್ರೋನ್ ಪ್ರಕರಣ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ

ಮೈಸೂರಲ್ಲಿ ರೂಪಾಂತರಿ ವೈರಸ್ ಹರಡದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಗಡಿಯಲ್ಲಿ ಚೆಕ್​ಪೋಸ್ಟ್​ ಮೂಲಕ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಡಿಸಿ ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ..

DC Bagadi Gautham
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್
author img

By

Published : Nov 29, 2021, 6:24 PM IST

ಮೈಸೂರು : ಮೈಸೂರಲ್ಲಿ ಓಮಿಕ್ರೋನ್​​ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವವರಿಗೆ 72 ಗಂಟೆಯೊಳಗೆ ಮಾಡಿಸಿರುವ ಆರ್​​​ಟಿಪಿಸಿಆರ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದರು.

ಈ ನಿಯಮವನ್ನು ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಅನುಸರಿಸಿಕೊಂಡು ಬರುತ್ತಿದ್ದೇವೆ. ನವೆಂಬರ್ 12 ರಿಂದ 25ರೊಳಗೆ ಜಿಲ್ಲೆಗೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದಿರುವವರಿಗೆ 15 ದಿನದ ನಂತರ ಇನ್ನೊಮ್ಮೆ ಆರ್​​ಟಿಪಿಸಿಆರ್ ಟೆಸ್ಟ್ ಮಾಡುವಂತೆ ಸರ್ಕಾರದಿಂದ ಆದೇಶ ಬಂದಿದೆ. ಈಗಾಗಲೇ ಟೆಸ್ಟ್ ಮಾಡಲು ಪ್ರಾರಂಭಿಸಿದ್ದೇವೆ ಎಂದಿದ್ದಾರೆ.

ಮೈಸೂರಲ್ಲಿ ಓಮಿಕ್ರೋನ್ ಪ್ರಕರಣ ಪತ್ತೆಯಾಗಿಲ್ಲ : ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ

ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ‌ ವಿದ್ಯಾರ್ಥಿಗಳು 72 ಗಂಟೆಯೊಳಗೆ ಮಾಡಿಸಿದ ಆರ್​​ಟಿಪಿಸಿಆರ್ ವರದಿ ತರಬೇಕು. 7 ದಿನಗಳಾದ ಬಳಿಕ ಮತ್ತೊಮ್ಮೆ ಅವರಿಗೆ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುವುದು. ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಸ್ಥಳವನ್ನು ಕಂಟೈನ್​​​ಮೆಂಟ್ ಝೋನ್ ಎಂದು ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.

ಶೇ.35ರಷ್ಟು ಸೆಕೆಂಡ್ ಡೋಸ್ ಲಸಿಕೆ ಬಾಕಿ : ಜಿಲ್ಲೆಯಲ್ಲಿ ಶೇ.35ರಷ್ಟು ಸೆಕೆಂಡ್ ಡೋಸ್ ಲಸಿಕೆ ಹಾಕಿಸಿಕೊಳ್ಳುವುದು ಬಾಕಿ ಇದೆ. ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಶೇ. 92.81ರಷ್ಟು ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.

ಶೇ.64.63ರಷ್ಟು ಸೆಕೆಂಡ್ ಡೋಸ್ ಪಡೆದಿದ್ದಾರೆ. ಅದರಲ್ಲಿ ಶೇ‌.35ರಷ್ಟು ಮಂದಿ 2ನೇ ಡೋಸ್ ಪಡೆಯಬೇಕಾಗಿದೆ. ಜಿಲ್ಲೆಯಲ್ಲಿ 2 ಲಕ್ಷ ಮಂದಿ ಸೆಕೆಂಡ್ ಡೋಸ್ ಪಡೆಯುವುದು ಬಾಕಿ ಇದೆ. ಮೈಸೂರು ‌ನಗರದಲ್ಲಿಯೇ 1 ಲಕ್ಷ ಮಂದಿ ಸೆಕೆಂಡ್ ಡೋಸ್ ಲಸಿಕೆ ಪಡೆಯುವುದು ಬಾಕಿ ಇದೆ ಎಂದಿದ್ದಾರೆ.

ಮಹಾನಗರ ಪಾಲಿಕೆ ಸಿಬ್ಬಂದಿ ಮನೆ ಮನೆಗೆ ಲಸಿಕೆ ಹಾಕಲು ಹೋಗುತ್ತಿದ್ದಾರೆ. ಆದರೆ, ಜನರು ಸ್ಪಂದಿಸುತ್ತಿಲ್ಲ. ಇಂದಿನ ಅಂತಾರಾಷ್ಟ್ರೀಯ ಮಟ್ಟದ ಪರಿಸ್ಥಿತಿ ಬೇರೆ ಇದೆ. ಜನರು ಅರ್ಥಮಾಡಿಕೊಂಡು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

72 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್: ಮೈಸೂರು ನಗರದಲ್ಲಿ ಆಲನಹಳ್ಳಿ ಕ್ಲಸ್ಟರ್​ನ ಕಾವೇರಿ ನರ್ಸಿಂಗ್ ಹಾಸ್ಟೆಲ್​ನಲ್ಲಿ 43 ಹಾಗೂ ಸೆಂಟ್ ಜೋಸೆಫ್ ನರ್ಸಿಂಗ್ ಕಾಲೇಜಿನಲ್ಲಿ 29 ಸೋಂಕಿತರು ಸೇರಿ ಈವರೆಗೆ 72 ಕೇಸ್ ವರದಿಯಾಗಿವೆ. ಅದರಲ್ಲಿ 21 ಮಂದಿಗೆ ಕೊರೊನಾ ಲಕ್ಷಣಗಳಿದ್ರೆ, ಉಳಿದವರು ಲಕ್ಷಣರಹಿತರಾಗಿದ್ದಾರೆ.

ಅವರ ಆರೋಗ್ಯ ಸ್ಥಿರವಾಗಿದೆ. ಅವರಲ್ಲಿ 11,020 ಮಂದಿ ಪ್ರಾಥಮಿಕ ಹಾಗೂ ದ್ವೀತೀಯ ಸಂಪರ್ಕಿತರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಆದರೆ, ಸರ್ಕಾರದ ಹೊಸ ಮಾರ್ಗಸೂಚಿಯಂತೆ 7ನೇ ದಿನವೂ ಆರ್​ಟಿಪಿಸಿಆರ್ ಟೆಸ್ಟ್ ಮಾಡಲಾಗುವುದು ಎಂದರು.

ಕಾರ್ಯಕ್ರಮ ಮುಂದೂಡಲು ಸಲಹೆ : ಶಾಲಾ-ಕಾಲೇಜುಗಳಲ್ಲಿ ಶೇ.100ರಷ್ಟು ಸ್ಕ್ರೀನಿಂಗ್ ಮಾಡಲು ಸರ್ಕಾರದಿಂದ ಆದೇಶ ಬಂದಿದೆ. ಈಗಾಗಲೇ ಡಿಡಿಪಿಐ, ಡಿಡಿಪಿಯುಗೆ ಆದೇಶ ನೀಡಲಾಗಿದೆ. 3 ಸಾವಿರದಿಂದ 5 ಸಾವಿರ ಟೆಸ್ಟ್ ಮಾಡಲು ಗುರಿ ನಿಗದಿಪಡಿಸಿದ್ದಾರೆ. ಅದರಲ್ಲಿ ಶೇ.10ರಷ್ಟು ವಿದ್ಯಾರ್ಥಿಗಳು, ಶಾಲೆಯಲ್ಲಿ ಶೇ.5ರಷ್ಟು ಮಕ್ಕಳನ್ನು ರ್ಯಾಂಡಮ್ ಟೆಸ್ಟ್ ಮಾಡಲು ಸರ್ಕಾರ ನಿರ್ದೇಶಿಸಿದೆ ಎಂದರು.

ಜೊತೆಗೆ ಅವಶ್ಯವಿಲ್ಲದ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದೂಡುವಂತೆ ಸಲಹೆ ನೀಡಲಾಗಿದೆ. ಅತಿ ಅಗತ್ಯ ಕಾರ್ಯಕ್ರಮವನ್ನು ವರ್ಚುಯಲ್ ಮೂಲಕ ನಡೆಸಲು ಸೂಚಿಸಲಾಗಿದೆ.

ತೀವ್ರ ಕಟ್ಟೆಚ್ಚರ : ಬಾವಲಿ ಚೆಕ್​​ಪೋಸ್ಟ್​​ನಲ್ಲಿ ತೀವ್ರ ನಿಗಾವಹಿಸಲಾಗಿದೆ. 160 ವಾಹನಗಳನ್ನು 72 ಗಂಟೆಯೊಳಗಿನ ಆರ್​ಟಿಪಿಸಿಆರ್ ವರದಿ ಇಲ್ಲದ ಕಾರಣ ವಾಪಸ್ ಕಳುಹಿಸಲಾಗಿದೆ. ಒಂದು ವಾರದಲ್ಲಿ 15,362 ಕೋವಿಡ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 168 ಪಾಸಿಟಿವ್ ಬಂದಿವೆ. ಪಾಸಿಟಿವಿಟಿ ರೇಟ್ ಶೇ 0.97ರಷ್ಟಿದೆ. ಒಂದು ತಿಂಗಳಲ್ಲಿ 90,734 ಮಂದಿಗೆ ಟೆಸ್ಟ್ ಮಾಡಲಾಗಿದ್ದು, 751 ಪ್ರಕರಣ ದೃಢವಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಓಮಿಕ್ರೋನ್‌​​ನಿಂದ ಜಾಗತಿಕ ಅಪಾಯ ಹೆಚ್ಚು, ವಿಶ್ವ ಸನ್ನದ್ಧಗೊಳ್ಳಬೇಕು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.