ಮೈಸೂರು: ರಾಜ್ಯದಲ್ಲಿ 2ನೇ ಅಲೆಯ ಕೋವಿಡ್ ಕೇಸ್ಗಳು ಬಹುತೇಕ ಕಡಿಮೆಯಾಗುತ್ತಿರುವ ಮಧ್ಯೆ ರಾಜ್ಯಕ್ಕೆ ಡೆಲ್ಟಾ ಪ್ಲಸ್ ಎಂಟ್ರಿಯಾಗಿದೆ ಎಂಬ ಮಾಹಿತಿ ಇತ್ತು. ಮಹಾರಾಷ್ಟ್ರ ಬಳಿಕ ಮೊದಲ ಡೆಲ್ಟಾ ಪ್ಲಸ್ ವೈರಸ್ ಮೈಸೂರಿನಲ್ಲಿ ಪತ್ತೆಯಾಗಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡೆಲ್ಟಾ ಪ್ಲಸ್ಗೆ ಸಂಬಂಧಿಸಿದ 40 ಸ್ಯಾಂಪಲ್ಗಳನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಡೆಲ್ಟಾ ಪ್ಲೆಸ್ ಪತ್ತೆಯಾಗಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಮಾಹಿತಿ ಬಂದರೆ ಖಚಿತ ಪಡಿಸಲಾಗುವುದು ಎಂದು ಹೇಳಿದರು.
ಇದನ್ನು ಓದಿ: ರಾಜ್ಯದಲ್ಲಿ ಡೆಲ್ಟಾ ಆಯ್ತು, ಇದೀಗ 'ಡೆಲ್ಟಾ ಪ್ಲಸ್' ವೈರಸ್ ಪತ್ತೆ!
ಮೈಸೂರಿನಲ್ಲಿ 800 ಮಂದಿ ಮಕ್ಕಳಿಗೆ ಕೊರೊನಾ ಸೋಂಕು ಈವರೆಗೆ ತಗುಲಿದೆ. ಮೂರನೇ ಅಲೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.