ETV Bharat / state

ಅಂಬಾರಿ ಸಾಗುವ ರಾಜಪಥದಲ್ಲಿ ಮೋದಿಯವರ ರೋಡ್ ಶೋ: ಪ್ರಧಾನಿಯಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ - PM modi visits mysuru

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿಗೆ ನರೇಂದ್ರ ಮೋದಿಯವರು ಆಗಮಿಸಿ ರೋಡ್​ ಶೋ ನಡೆಸಲಿದ್ದಾರೆಂದು ಶಾಸಕ ರಾಮದಾಸ್​ ತಿಳಿಸಿದ್ದಾರೆ.

bjp
ಬಿಜೆಪಿ ಸುದ್ದಿಗೋಷ್ಠಿ
author img

By

Published : Apr 28, 2023, 12:35 PM IST

Updated : Apr 30, 2023, 7:26 AM IST

ಮೈಸೂರು : ಪ್ರಧಾನಿ ನರೇಂದ್ರ ಮೋದಿಯವರು ದಸರಾ ಜಂಬೂ ಸವಾರಿ ಸಾಗುವ ರಾಜಪಥದಲ್ಲಿ ನಾಲ್ಕು ಕಿಲೋಮೀಟರ್ ದೂರದ ರೋಡ್ ಶೋವನ್ನು ಬಿಜೆಪಿ ಅಭ್ಯರ್ಥಿಗಳ ಪರ ಏಪ್ರಿಲ್ 30 ರಂದು ನಡೆಸಲಿದ್ದಾರೆ ಎಂದು ಶಾಸಕ ಎಸ್ ಎ. ರಾಮದಾಸ್ ತಿಳಿಸಿದ್ದಾರೆ. ಮೈಸೂರಿನ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ರಾಮದಾಸ್​​ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಬಗ್ಗೆ ಮಾಹಿತಿ ನೀಡಿದರು.

ಅರಮನೆ ನಗರಿ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಏಪ್ರಿಲ್ 30 ರಂದು ಬೃಹತ್ ಚುನಾವಣಾ ಪ್ರಚಾರ ರ‍್ಯಾಲಿಯನ್ನು ನಡೆಸಲಿದ್ದಾರೆ ಎಂದು ಶಾಸಕ ಎಸ್ .ಎ.ರಾಮದಾಸ್ ತಿಳಿಸಿದರು. ಶುಕ್ರವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ದೆಹಲಿಯಿಂದ ನೇರವಾಗಿ ಮೈಸೂರಿನ ಮಹಾರಾಜ ಕಾಲೇಜ್ ಮೈದಾನಕ್ಕೆ ಆಗಮಿಸಲಿರುವ ನರೇಂದ್ರ ಮೋದಿಯವರು ಅವರನ್ನು ಮೈಸೂರಿನ ಪಾರಂಪರಿಕ ವಸ್ತುಗಳಾದ ವಿಳ್ಯದೆಲೆ, ಶ್ರೀ ಗಂಧದ ಕಡ್ಡಿ, ಮೈಸೂರು ಸಿಲ್ಕ್ ಬಟ್ಟೆ ಮುಂತಾದವುಗಳನ್ನು ನೀಡಿ ಸ್ವಾಗತಿಸಲಾಗುವುದು.

ಕಲಾತಂಡಗಳಿಂದ ಪ್ರಧಾನಿಗೆ ಸ್ವಾಗತ: ಪ್ರಧಾನಿ ಮೋದಿಯವರ ರೋಡ್ ಶೋ ಮಾರ್ಗದಲ್ಲಿ ಅವರಿಗೆ ವಿಶೇಷವಾಗಿ ಸ್ವಾಗತ ನೀಡುವುದಕ್ಕಾಗಿ ನಾದಸ್ವರ ಸೇರಿದಂತೆ ಜಾನಪದ ಕಲಾತಂಡಗಳು, ಪೂರ್ಣ ಕುಂಭ ಹೊತ್ತ ಮಹಿಳೆಯರು ಭರ್ಜರಿ ಸ್ವಾಗತವನ್ನು ನೀಡಲಿದ್ದಾರೆ. ಬಳಿಕ ಮೋದಿಯವರು ಕಾರಿನ ಬಾಗಿಲ ಬಳಿ ನಿಂತು ಕೊಂಡೆ ಮುಡಾ, ರಾಮಸ್ವಾಮಿ ಸರ್ಕಲ್, ಚಾಮರಾಜ ನೂರಡಿ ರಸ್ತೆ ಮೂಲಕ ಗನ್ ಹೌಸ್​ಗೆ ಆಗಮಿಸಲಿದ್ದಾರೆ. ಸಂಜೆ 5.30 ಕ್ಕೆ ತೆರೆದ ವಾಹನದಲ್ಲಿ ರೋಡ್ ಶೋ ರ‍್ಯಾಲಿಯನ್ನು ಪ್ರಾರಂಭಿಸಲಿದ್ದಾರೆ.

ಅವರನ್ನು ಸುಮಾರು 30ಕ್ಕೂ ಹೆಚ್ಚು ಕಲಾತಂಡಗಳು, ಮೈಸೂರಿನ ಪಾರಂಪರಿಕ ವೇಷಭೂಷಗಳನ್ನು ಧರಿಸಿದ 30 ಸಾವಿರಕ್ಕೂ ಹೆಚ್ಚು ಜನರು ದಾರಿಯ ಉದ್ದಕ್ಕೂ ಸ್ವಾಗತಿಸಲಿದ್ದಾರೆ. ರ‍್ಯಾಲಿ ಸಂಸ್ಕೃತ ಪಾಠಶಾಲೆ ನಗರಪಾಲಿಕೆ ಸಿಟಿ ಬಸ್ ಸ್ಟ್ಯಾಂಡ್ ಕೆ ಆರ್ ಸರ್ಕಲ್ ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂ ಸಿ, ಮಿಲಿಯನ್ ಸರ್ಕಲ್ ತನಕ ಸಾಗಲಿದ್ದು, ಸುಮಾರು ಒಂದ ಲಕ್ಷಕ್ಕೂ ಹೆಚ್ಚು ಮಂದಿ ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ರ‍್ಯಾಲಿಯುದ್ದಕ್ಕೂ ಮೋದಿಯ ಕಾರ್ಯಕ್ರಮಗಳ ಪ್ರದರ್ಶನ: ಮೋದಿಯವರು ಹಾದುಹೋಗುವ ರಸ್ತೆ ಇಕ್ಕೆಲೆಗಳಲ್ಲಿ ಪಾರಂಪರಿಕ ಉಡುಗೆ ತೊಟ್ಟ ಜನರು ಸ್ವಾಗತಿಸಲಿದ್ದಾರೆ. ಅಲ್ಲದೇ ರಸ್ತೆ ಇಕ್ಕೆಲಗಳಲ್ಲಿ ಪ್ರಧಾನ ಪ್ರಧಾನಿ ನರೇಂದ್ರ ಮೋದಿಯವರು ನಡೆದು ಬಂದ ಹಾದಿ, ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ನೀಡಿದ ಕೊಡುಗೆಗಳು, ಲಾಲ್ ಚೌಕ್​ನಲ್ಲಿ ಬಾಲಕನಾಗಿದ್ದಾಗ ರಾಷ್ಟ್ರ ಧ್ವಜ ಹಾರಿಸಿದ ಚಿತ್ರದಿಂದ ಹಿಡಿದು, ಜಿ.20 ವಿಶ್ವದ ನಾಯಕನಾಗಿ ಬೆಳೆದ ಬಗೆ, ಮಾಡಿದ ಸಾಧನೆಗಳು ಮುಂತಾದವುಗಳ ಭಿತ್ತಿ ಚಿತ್ರಗಳನ್ನು ಹಾಕಲಾಗುವುದು. ಮೋದಿಯವರು ಹೊಂದಿರುವ ದೂರ ದೃಷ್ಟಿ ಕಲ್ಪನೆ ಮತ್ತು ಸಾಕಾರಗಳನ್ನು ತೋರಿಸಲಾಗುವುದು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹಿರಿಯ ನಾಗರಿಕರು ನೋಡಲು ಅನುಕೂಲವಾಗುವಂತೆ ಐದು ಸ್ಥಳಗಳಲ್ಲಿ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು ನಾಲ್ಕು ಕಿಲೋಮೀಟರ್ ರ‍್ಯಾಲಿಯನ್ನು ನಡೆಸಲಿರುವ ಮೋದಿಯವರು, ಮಿಲಿಯಮ್ ಸರ್ಕಲ್​ನಲ್ಲಿ ರ‍್ಯಾಲಿಯನ್ನು ಮುಕ್ತಾಯಗೊಳಿಸಲಿದ್ದು, ಅಲ್ಲಿಂದ ನೇರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ದೆಹಲಿಗೆ ತೆರಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ರಾಮದಾಸ್ ಮಾಹಿತಿ ನೀಡಿದರು.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ್ ಬಸ್ ಸೇವೆ ನೀಡುವ ಕಾಂಗ್ರೆಸ್​​ನ 5ನೇ ಭರವಸೆ ಅವೈಜ್ಞಾನಿಕ: ನಳಿನ್ ಕುಮಾರ್ ಕಟೀಲ್

Last Updated : Apr 30, 2023, 7:26 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.