ETV Bharat / state

ನಾಗರಹೊಳೆ ಅಭಯಾರಣ್ಯದಲ್ಲಿ ಕಳ್ಳ ಬೇಟೆಗಾರರ ಮೇಲೆ ಹದ್ದಿನ ಕಣ್ಣಿಡಲಿವೆ ಗರುಡ ಸಿಸಿಟಿವಿ ಕ್ಯಾಮೆರಾ - ಸೋಲಾರ್ ಪ್ಯಾನಲ್

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ನಾಗರಹೊಳೆ ಅಭಯಾರಣ್ಯದಲ್ಲಿ ಗರುಡ ಸಿಸಿಟಿವಿ ಕ್ಯಾಮೆರಾ ಟವರ್ ಅಳವಡಿಕೆ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಇದು ಕಳ್ಳಬೇಟೆಗಾರರ ಮೇಲೆ ಹದ್ದಿನ ಕಣ್ಣಿಡಲಿದೆ.

Garuda CCTV camera
ಗರುಡ ಸಿಸಿಟಿವಿ ಕ್ಯಾಮೆರಾ
author img

By ETV Bharat Karnataka Team

Published : Nov 23, 2023, 6:37 PM IST

ಮೈಸೂರು: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿ ಕಳ್ಳ ಬೇಟೆಗಾರರ ಚಲನವಲನ ಅರಿಯಲು ಹಾಗೂ ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಅತ್ಯಾಧುನಿಕ ತಂತ್ರಜ್ಞಾನದ ಗರುಡ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸಿಸಿಟಿವಿ ಕ್ಯಾಮೆರಾ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾ ಟವರ್ ​ನಿರ್ಮಿಸಲಾಗುತ್ತಿದ್ದು, ಈ ಗರುಡ ಸಿಸಿಟಿವಿ ಕ್ಯಾಮೆರಾದ ವಿಶೇಷತೆ, ಕಾರ್ಯವೈಖರಿ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಅರಣ್ಯ ಇಲಾಖೆಗೆ ಕ್ಷಣದಲ್ಲಿಯೇ ಮಾಹಿತಿ : ಗರುಡ ಹೆಸರಿನ ಸಿಸಿಟಿವಿ ಕ್ಯಾಮೆರಾವನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳು, ಕಳ್ಳಬೇಟೆಗಾರರ ಚಲನವಲನ ಮೇಲೆ ನಿಗಾ ಇಡಲು, ಹುಲಿ ಮತ್ತು ಆನೆಗಳ ಚಲನವಲನ, ಯಾವ ಸಮಯದಲ್ಲಿ ಹಾದು ಹೋಗಿದೆ, ಆನೆಗಳ ಹಿಂಡು ಕಾಣಿಸಿಕೊಂಡಿದೆಯೇ ಅಥವಾ ಒಂಟಿ ಆನೆಯೇ, ಕಳ್ಳ ಬೇಟೆಗಾರರು ಒಳ ನುಸುಳಿದ್ದಾರೆಯೇ? ಯಾವ ಸಂದರ್ಭದಲ್ಲಿ ನುಸುಳಿದರು, ಅವರ ಬಳಿ ಶಸ್ತ್ರಾಸ್ತ್ರಗಳು ಇವೆಯೇ ಎಂಬುದನ್ನೆಲ್ಲ ಗುರುತಿಸುವ ಸಾಮರ್ಥ್ಯ ವಿಶೇಷವಾಗಿ ಗರುಡ ಸಿಸಿಟಿವಿ ಕ್ಯಾಮೆರಾಗೆ ಇದೆ.

ಯಾವುದೇ ವ್ಯಕ್ತಿ ಮತ್ತು ವನ್ಯಜೀವಿ ಚಲಿಸಿದರೂ ಅವರ ಫೋಟೊ ಸೆರೆ ಹಿಡಿದು ಎಲ್ಲ ಕಡೆ ರವಾನಿಸಲಿದೆ. ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿದ ಪೋಟೊವನ್ನು ಇಲಾಖೆಗೆ ರವಾನಿಸಿ ಮಾಹಿತಿ ನೀಡುತ್ತದೆ. ಸಿಸಿಟಿವಿ ಕ್ಯಾಮೆರಾಗಳಿಂದ ಅರಣ್ಯ ಇಲಾಖೆಯವರು ಸ್ಥಳೀಯ ಗ್ರಾಮದ ಜನರಿಗೆ ಸೂಚನೆ ನೀಡಲು ಅನುಕೂಲವಾಗಲಿದೆ.

32 ಲಕ್ಷ ರೂಪಾಯಿ ವೆಚ್ಚದ ಈ ನೂತನ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಟಿವಿಎಸ್, ಎಸ್ ಎಸ್ ಟಿ ಕಂಪನಿ ವಹಿಸಿಕೊಂಡಿದೆ. ಜಿಐ ಬೇಸ್ಡ್ ತಂತ್ರಜ್ಞಾನವನ್ನು ಬೆಂಗಳೂರು ಮೂಲದ ಅಲ್ಡಾಯಿಸ್ ಸಂಸ್ಥೆ ನಿರ್ವಹಿಸುತ್ತಿದೆ.

ಕ್ಯಾಮೆರಾಗೆ ಗರುಡ ಹೆಸರು: ಹದ್ದು, ಗಿಡುಗ, ಗೂಬೆ ಮತ್ತಿತರ ಜಾತಿಗೆ ಸೇರಿದ ಪಕ್ಷಿಗಳಲ್ಲಿ ಗರುಡ ಅತ್ಯಂತ ಬಲಶಾಲಿ, ಗಾತ್ರದಲ್ಲಿಯೂ ದೊಡ್ಡದಾಗಿದೆ. ಗರುಡನಿಗೆ ಪಕ್ಷಿ ರಾಜ ಎಂದು ಕರೆಯುತ್ತಾರೆ. ಈ ಪಕ್ಷಿ ಕಣ್ಣು ಅತ್ಯಂತ ಸೂಕ್ಷ್ಮ, ಚುರುಕಾಗಿರುತ್ತದೆ. ಭೂಮಿಯಿಂದ ನೂರಾರು ಕಿ ಮೀ ದೂರದಲ್ಲಿ ಹಾರಾಡುತ್ತಿದ್ದರೂ, ಭೂಮಿಯಲ್ಲಿ ತನ್ನ ಆಹಾರವನ್ನು ಪತ್ತೆ ಹಚ್ಚಿ ಬೇಟೆಯಾಡುವ ಸಾಮರ್ಥ್ಯ ಗರುಡಕ್ಕಿದೆ. ಹಾಗಾಗಿ ಅರಣ್ಯ ಇಲಾಖೆಯೂ ಈ ನೂತನ ಯೋಜನೆಗೆ ಗರುಡ ಎಂಬ ಹೆಸರಿಟ್ಟಿದೆ.

ಸಿಸಿಟಿವಿ ಕ್ಯಾಮೆರಾ ಕಾರ್ಯವೈಖರಿ ಹೇಗೆ : ಗರುಡ ಕನಿಷ್ಠ ಸುಮಾರು 20 ಮೀಟರ್ ಉದ್ದದ ಎಲೆಕ್ಟ್ರಿಕ್ ಕಂಬವನ್ನು ನೆಲದಲ್ಲಿ ನೆಟ್ಟು, ಕಂಬದ ತುದಿಗೆ ಬೃಹತ್‌ ಗಾತ್ರದ ಕ್ಯಾಮೆರಾ ಜೊತೆಗೆ ಇನ್ನು ಎರಡರಿಂದ ಮೂರು ಕ್ಯಾಮೆರಾ ಅಳವಡಿಸಲಾಗಿದೆ. ಈ ದೊಡ್ಡ ಗಾತ್ರದ ಕ್ಯಾಮೆರಾ ಅಳವಡಿಸಿರುವ ಸ್ಥಳದಿಂದ ಕನಿಷ್ಠ 5 ಕಿಲೋ ಮೀಟರ್ ವ್ಯಾಪ್ತಿ ಅಕ್ರಮವಾಗಿ ಓಡಾಡುವವರ ಚಲನವಲನ ಸೇರಿದಂತೆ ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ.

ಇತರ ಸಣ್ಣ ಕ್ಯಾಮೆರಾಗಳು 5 ರಿಂದ 50 ಮೀಟರ್ ದೂರದ ವರೆಗೆ ನಿಗಾವಹಿಸುತ್ತವೆ. ಕಂಬಗಳ ಮೇಲೆ ಸೋಲಾರ್ ಪ್ಯಾನೆಲ್, ಬ್ಯಾಟರಿ ಅಳವಡಿಸಲಾಗಿದೆ. ಸಿಬ್ಬಂದಿ ಕಚೇರಿಯಲ್ಲಿ ಕುಳಿತು ಗರುಡ ಕ್ಯಾಮೆರಾ ಮುಖಾಂತರ ಸ್ಥಳದಲ್ಲಿನ ಚಲನವಲನಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಬಹುದಾಗಿದೆ. ಈ ಮೂಲಕ ಕಳ್ಳಬೇಟೆಗಾರರ ಹಾವಳಿ ನಿಯಂತ್ರಿಸಬಹುದಾಗಿದೆ.

ಸಿಮ್, ಇಂಟರ್ನೆಟ್ ಸಂಪರ್ಕ: ಈ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾ ಮತ್ತೊಂದು ವಿಶೇಷತೆ ಎಂದರೆ ವೆಬ್, ಸಿಸಿಟಿವಿ ಕ್ಯಾಮೆರಾ, ಸಿಮ್ ಆಧಾರಿತ ಕ್ಯಾಮೆರಾಗಳಿಗೆ ಸಂಪರ್ಕ ಬಳಸಿಕೊಂಡು, ನಾಗರಹೊಳೆ ಉದ್ಯಾನವನದಲ್ಲಿ ಅಳವಡಿಸಿರುವ ಉಳಿದ ಕ್ಯಾಮೆರಾಗಳಿಗೆ ಸಂಪರ್ಕ ನೀಡಬಹುದಾಗಿದೆ.

ಇದಕ್ಕೆ ಇಂಟರ್ನೆಟ್ ಅವಶ್ಯವಿದ್ದು, ಅದನ್ನು ಸಹ ಅವು ಹೊಂದಿವೆ. ಗರುಡನ ಸಾವಿರಾರೂ ಕ್ಯಾಮೆರಾಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ದಿನದ 24 ಗಂಟೆಯೂ ಸಹ ಕಾರ್ಯ ನಿರ್ವಹಿಸಲಿದೆ. ಈ ಸಿಸಿಟಿವಿಯಲ್ಲಿ ಸಂಗ್ರಹವಾಗುವ ಫುಟೇಜ್ ಗಳನ್ನು 6 ತಿಂಗಳವರೆಗೂ ಇಡಬಹುದಾಗಿದೆ.

ಗರುಡ ಕ್ಯಾಮೆರಾ ಕುರಿತು ಡಿಸಿಎಫ್ ಹೇಳಿದ್ದೇನು: ಈ ನೂತನ ತಂತ್ರಜ್ಞಾನ ಕ್ಯಾಮೆರಾ ಅಳವಡಿಕೆ ಬಗ್ಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯಸಂರಕ್ಷಣಾಧಿಕಾರಿ ಹರ್ಷಕುಮಾರ್​ ಚಿಕ್ಕನರಗುಂದ ಈಟಿವಿ ಭಾರತಗೆ ಮಾಹಿತಿ ನೀಡಿದರು. 24 ಗಂಟೆ ವನ್ಯಜೀವಿಗಳ ಚಲನವಲನ ಪರಿಶೀಲನೆ, ಸೂಕ್ಷ್ಮ ಪ್ರದೇಶ ಕುರಿತಾದ ಸಮಗ್ರ ಮಾಹಿತಿಗಳನ್ನು ಈ ಗರುಡ ಕ್ಯಾಮೆರಾಗಳಿಂದ ಪಡೆಯಬಹುದಾಗಿದೆ.

ವಿಶೇಷವಾಗಿ ವನ್ಯಜೀವಿ- ಮಾನವ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಈ ಯೋಜನೆ ಮುಖ್ಯವಾಗಿದೆ. ಇದರ ಸಾಧಕ ಬಾಧಕಗಳನ್ನು 6 ತಿಂಗಳು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತೆ ಕ್ರಮವಾಗಿ ಕಾಡಂಚಿನಲ್ಲಿ ವಾಸಿಸುವವರಿಗೆ ಬೇಗ ಕಾರ್ಯ ಮಾಡಲು ಅನುಕೂಲವಾಗಲಿದೆ. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯವೂ ಇದೆ ಎಂದು ತಿಳಿಸಿದ್ದಾರೆ.

ಈ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಟವರ್​ಗಳನ್ನು ನಿರ್ಮಿಸಿದ್ದು, ಮುಂದೆ ಇನ್ನೂ ಹೆಚ್ಚು ಟವರ್​ಗಳನ್ನು ನಿರ್ಮಿಸಲಾಗುವುದು. ಈ ಯೋಜನೆಗೆ 32 ಲಕ್ಷ ರೂ. ಖರ್ಚಾಗಲಿದೆ. ಹಂತ ಹಂತವಾಗಿ ಇನ್ನೂ ಗರುಡ ಸಿಸಿಟಿವಿ ಕ್ಯಾಮೆರಾ ಟವರ್​ಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:ಬೆಂಗಳೂರು ಕಂಬಳ: ಉಪ್ಪಿನಂಗಡಿಯಿಂದ ಹೊರಟ ಸುಮಾರು 150 ಜೋಡಿ ಕೋಣಗಳು-ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.