ETV Bharat / state

ವಂದೇ ಭಾರತ್ ರೈಲು ಸ್ವಚ್ಛತೆಗೆ '14 ನಿಮಿಷಗಳ ಪವಾಡ'... ಹೊಸ ವಿಧಾನ ಪರಿಚಯಿಸಲಿರುವ ಮೈಸೂರು ನೈಋತ್ಯ ರೈಲ್ವೆ - etv bharat kannada

ರೈಲ್ವೆ ಸಚಿವಾಲಯದ ನಿರ್ದೇಶನದಂತೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ವಂದೇ ಭಾರತ್ ರೈಲಿಗೆ ’14 ನಿಮಿಷಗಳ ಪವಾಡ’ ಎಂಬ ಶುಚಿಗೊಳಿಸುವ ಹೊಸ ಪ್ರಕ್ರಿಯೆಯನ್ನು ಪರಿಚಯಿಸುತ್ತಿದೆ.

mysuru-south-western-railway-introducing-14-minutes-miracle-to-rail-cleanliness
ವಂದೇ ಭಾರತ್ ರೈಲು ಸ್ವಚ್ಛತೆಗೆ ಹೊಸ ವಿಧಾನ ಪರಿಚಯಿಸಲಿರುವ ಮೈಸೂರು ನೈಋತ್ಯ ರೈಲ್ವೆ
author img

By ETV Bharat Karnataka Team

Published : Oct 1, 2023, 10:17 PM IST

Updated : Oct 2, 2023, 7:50 AM IST

ವಂದೇ ಭಾರತ್ ರೈಲು ಸ್ವಚ್ಛತೆಗೆ ಹೊಸ ವಿಧಾನ ಪರಿಚಯಿಸಲಿರುವ ಮೈಸೂರು ನೈಋತ್ಯ ರೈಲ್ವೆ

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರೈಲ್ವೆ ಸಚಿವಾಲಯದ ನಿರ್ದೇಶನದಂತೆ ಚೆನ್ನೈ-ಮೈಸೂರು – ಚೆನ್ನೈ ವಂದೇ ಭಾರತ್ ರೈಲಿಗೆ ’14 ನಿಮಿಷಗಳ ಪವಾಡ’ ಎಂಬ ಶುಚಿಗೊಳಿಸುವ ಹೊಸ ಪ್ರಕ್ರಿಯೆಯನ್ನು ಪರಿಚಯಿಸುತ್ತಿದೆ. ಮೈಸೂರು ವಿಭಾಗವು ಉಪಕ್ರಮವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಚೆನ್ನೈ-ಮೈಸೂರು-ಚೆನ್ನೈನ 16 ಕೋಚ್‌ಗಳ ರೈಲಿನ ಸ್ವಚ್ಛತೆಗೆ ಈ ವಿನೂತನ ಶುಚಿಗೊಳಿಸಲು ನಡೆಸಲಾಗುವ ಪ್ರಕ್ರಿಯೆಯು ರೈಲಿನ ಸ್ವಚ್ಛತೆ ಮತ್ತು ದಕ್ಷತೆಯಲ್ಲಿ ನವೀನ ಮಾದರಿಯ ಬದಲಾವಣೆ ತರುತ್ತಿದೆ.

"14 ನಿಮಿಷಗಳ ಪವಾಡ" ಕಾರ್ಯಕ್ರಮವನ್ನು ವಂದೇ ಭಾರತ್ ರೈಲುಗಳು ವಿವಿಧ ಗಮ್ಯ ಸ್ಥಾನಗಳಿಗೆ ಆಗಮಿಸಿದ ನಂತರ ಅವುಗಳನ್ನು ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿರುವ ಈ ವಿಧಾನದಿಂದ ಕೇವಲ 14 ನಿಮಿಷಗಳಲ್ಲಿ ಸಂಪೂರ್ಣವಾಗಿ ಸಮಗ್ರವಾಗಿ ಶುಚಿಗೊಳಿಸುವಿಕೆಯನ್ನು ಸಾಧಿಸಲಾಗುತ್ತದೆ. ಇದು ರೈಲಿನ ಹಿಂತಿರುಗುವಿಕೆಯ ಸಮಯವನ್ನು ಗಣನೀಯವಾಗಿ ಇಳಿಸುತ್ತದೆ ಮತ್ತು ಪ್ರಯಾಣಿಕರಿಗೆ ಆಹ್ಲಾದಕರ ಅನುಭವ ನೀಡುತ್ತದೆ.

ಸ್ವಚ್ಛಗೊಳಿಸುವ ಪ್ರಕ್ರಿಯೆಯ ಪ್ರಮುಖ್ಯಾಂಶಗಳು: ಒಟ್ಟು ಸ್ವಚ್ಛಗೊಳಿಸವ 48 ಸಿಬ್ಬಂದಿ ಮತ್ತು 3 ಮೇಲ್ವಿಚಾರಕರ ನಿಯೋಜನೆ ಮಾಡಲಾಗುತ್ತಿದೆ. ಪ್ರತಿಯೊಂದು ಬೋಗಿಗೂ ತರಬೇತಿ ಪಡೆದ 3 ಸಿಬ್ಬಂದಿ ಸದಸ್ಯರನ್ನು ನಿಯೋಜಿಸಲಾಗುತ್ತದೆ. ಮೊದಲನೆ ಸಿಬ್ಬಂದಿ ಕಸವನ್ನು ಸಂಗ್ರಹಿಸುತ್ತಾರೆ, ಒಣ ಒರಸುವಿಕೆಯನ್ನು ನಿರ್ವಹಿಸುತ್ತಾರೆ ಮತ್ತು ಹೊರಗಿನ ಕಿಟಕಿ ಗಾಜು ಸ್ವಚ್ಛಗೊಳಿಸುತ್ತಾರೆ. ಎರಡನೆಯ ಸಿಬ್ಬಂದಿ ಉಪಹಾರ ಮೇಜು ಮತ್ತು ಆಸನಗಳನ್ನು ಶುಚಿಗೊಳಿಸುತ್ತಾರೆ ಮತ್ತು ನೀರಿನಿಂದ ಒರೆಸುತ್ತಾರೆ. ಮೂರನೆಯ ಸಿಬ್ಬಂದಿ ಕಸದಬುಟ್ಟಿಗಳನ್ನು ಶೌಚಾಲಯಗಳನ್ನು ಕನ್ನಡಿಗಳನ್ನು ದ್ವಾರದ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಈ ಪ್ರದೇಶಗಳನ್ನು ಸೂಕ್ಷ್ಮವಾಗಿ ಒರೆಸುತ್ತಾರೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಈ ಕೆಲಸದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಯ ಅಚಲವಾದ ಸಮರ್ಪಣೆಗೆ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು. "14 ನಿಮಿಷಗಳ ಪವಾಡ" ಕಾರ್ಯಕ್ರಮವು ವಂದೇ ಭಾರತ್ ರೈಲುಗಳಲ್ಲಿ ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ನಿಖರವಾಗಿ ಹೊಂದಿಸುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಈ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗಿದ್ದೂ ನಿಖರವಾದ ಸಮಯದ ಚೌಕಟ್ಟಿನೊಳಗೆ ರೈಲು ಹಿಂದಿರುಗಿ ಹೊರಡಲು ಸಿದ್ಧ ಮಾಡುತ್ತದೆ.

ಈ ಮೊದಲು, ಚೆನ್ನೈ-ಮೈಸೂರು-ಚೆನ್ನೈ ವಂದೇ ಭಾರತ್ ರೈಲಿನ 16 ಕೋಚ್​ಗಳನ್ನು ಸ್ವಚ್ಛಗೊಳಿಸಲು ಸುಮಾರು 30ರಿಂದ 45 ನಿಮಿಷಗಳು ಬೇಕಾಗುತ್ತಿತ್ತು. "14 ನಿಮಿಷಗಳ ಪವಾಡ"ದ ಪರಿಚಯದೊಂದಿಗೆ, ಸ್ವಚ್ಛಗೊಳಿಸುವ ಪ್ರಕ್ರಿಯೆಯು ಈಗ ಸುಸಂಘಟಿತ ಪ್ರಯತ್ನವಾಗಿದೆ. ಪ್ರತಿ ಕೋಚ್​ಗೆ 3 ಶುಚಿಗೊಳಿಸುವ ಸಿಬ್ಬಂದಿ ಇದ್ದು, ಕೇವಲ 14 ನಿಮಿಷಗಳಲ್ಲಿ ರೈಲು ನಿರ್ಗಮಿಸಲು ಅನಕೂಲವಾಗುವಂತೆ ಕೆಲಸ ಮಾಡುತ್ತಾರೆ.

ಇಂದು ಮುಂಜಾನೆ, ಮೈಸೂರು ರೈಲು ನಿಲ್ದಾಣದಲ್ಲಿ "ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್" ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್, ಇತರ ಹಿರಿಯ ಅಧಿಕಾರಿಗಳು, ವಿಭಾಗದ ಸಿಬ್ಬಂದಿ ಮತ್ತು ‘ಬ್ರಹ್ಮಕುಮಾರಿ’ ಮತ್ತು ಇತರ ಸಂಸ್ಥೆಗಳ ಸ್ವಯಂಸೇವಕರುಗಳ ಜೊತೆ ಶ್ರಮದಾನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಈ ಕಾರ್ಯಕ್ರಮವು ಮೈಸೂರು ವಿಭಾಗದಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 02 ರವರೆಗೆ ಆಯೋಜಿಸಲಾಗಿರುವ ಹದಿನೈದು ದಿನಗಳ ವಿಶೇಷ ಸ್ವಚ್ಛತಾ ಅಭಿಯಾನದ ಭಾಗವಾಗಿತ್ತು. ರೈಲ್ವೆ ನಿಲ್ದಾಣಗಳು, ರೈಲುಗಳು, ಕಚೇರಿಗಳು, ಕಾಲೋನಿಗಳು, ಡಿಪೋಗಳು, ಆಸ್ಪತ್ರೆಗಳು, ಇತ್ಯಾದಿ ಸೇರಿದಂತೆ ಎಲ್ಲಾ ಆವರಣಗಳಲ್ಲಿ ಸ್ವಚ್ಛತೆಯಲ್ಲಿ ಗಮನೀಯವಾದ ಮತ್ತು ಸ್ಪಷ್ಟವಾದ ಸುಧಾರಣೆಗಳನ್ನು ತರುವ ಉದ್ದೇಶದಿಂದ ಸ್ವಚ್ಛತಾ ಪಾಕ್ಷಿಕ ಆಯೋಜಿಸಲಾಗಿದೆ.

ಇದನ್ನೂ ಓದಿ: ಮೈಸೂರು: ನಾಲೆಗೆ ಬಿದ್ದ ಜಿಂಕೆಯನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಿಸಿದ ಪಿಎಸ್​ಐ

Last Updated : Oct 2, 2023, 7:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.