ಮೈಸೂರು: ಜಗತ್ಪ್ರಸಿದ್ಧ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗೋಪಾಲಸ್ವಾಮಿ ಸಾಕಾನೆಯು ಕಾಡಾನೆ ದಾಳಿಗೆ ತುತ್ತಾಗಿ ಇಂದು ಮೃತಪಟ್ಟಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕೊಳುವಿಗೆ ಬಳಿ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತ ಪಟ್ಟಿದ್ದು, ಮಂಗಳವಾರದಂದು ನೇರಳಕುಪ್ಪೆ ಬಿ ಹಾಡಿಯ ಕ್ಯಾಂಪ್ನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದ ವೇಳೆ ಮಸ್ತಿಗೆ ಬಂದ ಗೋಪಾಲಸ್ವಾಮಿ ಕೊಳುವಿಗೆ ಅರಣ್ಯ ಪ್ರದೇಶಕ್ಕೆ ಹೋಗಿದೆ.
ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿಯ ಮೇಲೆ ಈ ಹಿಂದೆ ಅರಣ್ಯ ಇಲಾಖೆಯವರು ಪುಂಡಾಟ ನಡೆಸುತ್ತಿರುವ ಕಾಡಾನೆಗೆ ಕಾಲರ್ ಅಳವಡಿಸಿದ್ದು, ಅಯ್ಯಪ್ಪ ಪುಂಡಾನೆಯ ದಾಳಿಗೆ ಸಿಲುಕಿ ತೀವ್ರತರವಾಗಿ ಗಾಯಗೊಂಡಿತ್ತು.
ಮಂಗಳವಾರ ಮಧ್ಯಾಹ್ನದಿಂದ ನಾಲ್ಕು ವೈದ್ಯರ ತಂಡ ಎಲ್ಲ ರೀತಿಯ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬುಧವಾರ ಮಧ್ಯಾಹ್ನ 1 ಗಂಟೆ ವೇಳೆ ಸಾವಿಗೀಡಾಗಿದೆ. ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಎಸಿಎಫ್ ದಯಾನಂದ್ ಸೇರಿದಂತೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು. ಇಂದು ಸಂಜೆ ಕೊಳುವಿಗೆ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.
ಓದಿ: ಮೂರು ತಿಂಗಳಲ್ಲಿ ಮೂವರು ರೈತರು ಬಲಿ: ಕಾಡಾನೆ ಸ್ಥಳಾಂತರಕ್ಕೆ ಸರ್ಕಾರ ಆದೇಶ