ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 40 × 60 ವಿಸ್ತೀರ್ಣದ ಸಾಂಸ್ಕೃತಿಕ ವೇದಿಕೆ ಸಿದ್ದವಾಗುತ್ತಿದ್ದು, 8 ದಿನಗಳ ಕಾಲ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕೋವಿಡ್ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಬಾರಿ ಚಿಕ್ಕ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಲಾವಿದರಿಗೆ ಮಾತ್ರ ಈ ವೇದಿಕೆಯಲ್ಲಿ ಅವಕಾಶ ಇರಲಿದೆ. ಸಾರ್ವಜನಿಕರು ಮತ್ತು ವಿಐಪಿಗಳಿಗೆ ಯಾವುದೇ ಆಸನ ವ್ಯವಸ್ಥೆ ಇರುವುದಿಲ್ಲ. ಮಳೆ ಬಂದರೆ ಕಾರ್ಯಕ್ರಮ ನಡೆಸುವ ಸಲುವಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಪಕ್ಕದಲ್ಲಿ ಜರ್ಮನ್ ಸ್ಟೆಚ್ಚರ್ ವಾಟರ್ ಪ್ರೂಫ್ ವೇದಿಕೆ ಮಾಡಲಾಗುತ್ತಿದೆ.
ಸಾರ್ವಜನಿಕರಿಗೆ ಎಂಟ್ರಿ ಇಲ್ಲ : ಕೊರೊನಾ ಹಿನ್ನೆಲೆ ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿದೆ. ಎಲ್ಲ ಕಾರ್ಯಕ್ರಮಗಳ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದ್ದು, ಜನರು ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ರಾಜ ಪರಂಪರೆ ಶೈಲಿಯಲ್ಲಿ ಸಾಂಸ್ಕೃತಿಕ ವೇದಿಕೆ ಸಿದ್ದಪಡಿಸಲಾಗಿದ್ದು, ಇಲ್ಲಿ 3 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ಸಿದ್ದಪಡಿಸುತ್ತಿರುವ ರಾಘವೇಂದ್ರ ಎಂಬವರು ಈಟಿವಿ ಭಾರತ್ ಮಾಹಿತಿ ನೀಡಿದ್ದಾರೆ.
ಅರಮನೆ ಮುಂಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ :
ಸೆ. 17 - ನೃತ್ಯ ರೂಪಕ
ಸೆ.18 - ಕೊಳಲು ವಾದನ
ಸೆ.19 - ಭಕ್ತಿ ಸಂಗೀತ ಮತ್ತು ಪಂಚವೀಣೆ
ಸೆ.20 - ವಚನಗಾಯನ ಮತ್ತು ದಾಸವಾಣಿ
ಸೆ.21 - ಎಸ್.ಪಿ.ಬಿ ನುಡಿ ನಮನ
ಸೆ.22 - ಪೋಲಿಸ್ ಬ್ಯಾಂಡ್ ಮತ್ತು ಫ್ಯೂಷನ್ ಸಂಗೀತ
ಸೆ.23 - ಜಾನಪದ ಗಾಯನ ಮತ್ತು ಹಿಂದೂಸ್ತಾನಿ ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ
ಸೆ.24- ಲಯತರಂಗ