ಮೈಸೂರು : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ದಸರಾ ನೋಡುವ ಆಸೆಯಿಂದ ನಗರಕ್ಕೆ ಬರಬೇಡಿ ಎಂದು ಜಿ.ಪಂ ಸಿಇಒ ಡಿ.ಭಾರತಿ ಮನವಿ ಮಾಡಿದ್ದಾರೆ.
ಜಿ.ಪಂ ಕಚೇರಿಯಲ್ಲಿ ಮಾತನಾಡಿ, ರಾಜ್ಯ ಮಟ್ಟದ ತಾಂತ್ರಿಕ ಸಮಿತಿ ವರದಿಯಂತೆ ದಸರಾ ಆಚರಣೆ ಮಾಡುತ್ತಿರುವುದರಿಂದ, 'ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಆದರಲ್ಲಿ 300 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಇರುವುದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಜನರು ಮನೆಯಲ್ಲಿಯೇ ಕುಳಿತು ದಸರಾ ನೋಡಿ, ಆರೋಗ್ಯ ಕಾಪಾಡಿಕೊಳ್ಳಿ' ಎಂದು ಸಲಹೆ ನೀಡಿದ್ದಾರೆ.
'ದಸರಾ ನೋಡುವ ಆಸೆಯಿಂದ ಬಂದು, ಕೊರೊನಾ ಸೋಂಕಿಗೆ ತುತ್ತಾಗಿ ಮತ್ತೆ ಹಳ್ಳಿಗೆ ಹೋದರೆ ಕೊರೊನಾ ಮತ್ತಷ್ಟು ಹರಡಲಿದೆ. 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಮಕ್ಕಳು ಅನಾವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಿ' ಎಂದು ಹೇಳಿದ್ದಾರೆ.