ಮೈಸೂರು: 80 ದಿನಗಳ ನಂತರ ವಿಶ್ವ ವಿಖ್ಯಾತ ಶ್ರೀಚಾಮರಾಜೇಂದ್ರ ಮೃಗಾಲಯ ಇಂದಿನಿಂದ ಪುನಾರಂಭವಾಗಿದ್ದು, ಪ್ರವಾಸಿಗರು ಕೂಡ ಪ್ರಾಣಿಗಳನ್ನು ನೋಡಲು ಉತ್ಸಾಹದಿಂದ ಆಗಮಿಸುತ್ತಿದ್ದಾರೆ.
ಮೃಗಾಲಯದಲ್ಲಿ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ನಂತರ ಟೇಪ್ ಕತ್ತರಿಸುವ ಮೂಲಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮೃಗಾಲಯವನ್ನು ಪುನಾರಂಭಿಸಿದರು.
ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಹರ್ಷವರ್ಧನ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೃಗಾಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಲಕರ್ಣಿ ಮೃಗಾಲಯದ ಬ್ಯಾಟರಿ ಚಾಲಿತ ವಾಹನದಲ್ಲಿ ಪ್ರಾಣಿಗಳ ವೀಕ್ಷಣೆ ಮಾಡಿದರು.
ಮೃಗಾಲಯಕ್ಕೆ ಆಗಮಿಸಿದ ಪ್ರವಾಸಿಗರಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿ ನಂತರ ಒಳಗೆ ಬಿಡಲಾಯಿತು.