ಮೈಸೂರು: 2019ರ ಟ್ರಯಥ್ಲಾನ್ ಕ್ರೀಡೆಯಲ್ಲಿ ಮೈಸೂರಿನ ದಂತ ವೈದ್ಯೆ 'ಐರನ್ ವುಮೆನ್' ಪ್ರಶಸ್ತಿ ಪಡೆಯುವ ಮೂಲಕ ನಗರದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ.
ನವೆಂಬರ್ 30ರಂದು ಆಸ್ಟ್ರೇಲಿಯಾದಲ್ಲಿ ನಡೆದ ಟ್ರಯಥ್ಲಾನ್ ಐರನ್ ಕ್ರೀಡಾಕೂಟದಲ್ಲಿ ನಗರದ ಉಷಾ ಹೆಗ್ಡೆ ಪಾಲ್ಗೊಂಡಿದ್ದರು. ಈಜು, ಸೈಕ್ಲಿಂಗ್ ಮತ್ತು ಓಟ ಈ ಮೂರು ಸ್ಪರ್ಧೆಗಳಲ್ಲಿ ಯಾರು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸುತ್ತಾರೋ ಅವರು ಐರನ್ ವುಮೆನ್ ಆಗಿ ಹೊರಹೊಮ್ಮುತ್ತಾರೆ ಎಂದು ಘೋಷಣೆ ಮಾಡಲಾಗಿತ್ತು.
40 ರಿಂದ 49 ವಯಸ್ಸಿನ ವಿಭಾಗದಲ್ಲಿ ಭಾಗವಹಿಸಿದ 229 ಸ್ಪರ್ಧಿಗಳಲ್ಲಿ ಉಷಾ ಹೆಗ್ಡೆ 26ನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ಅವರಿಗೆ 'ಐರನ್ ವುಮೆನ್' ಗರಿ ಧಕ್ಕಿದೆ. ಇವರು ಮೈಸೂರಿನ ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಓರಲ್ ಪೆಥಾಲಜಿ ಮತ್ತು ಮೈಕ್ರೋ ಬಯಾಲಜಿ ಪ್ರಾಧ್ಯಾಪಕಿ ಹಾಗೂ ದಂತ ವೈದ್ಯೆ ಆಗಿ ಸೇವೆ ಸಲ್ಲಿಸುತ್ತಿದ್ದಾರೆ..