ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮೈಸೂರು ವಿಶ್ವವಿದ್ಯಾಲಯದಿಂದ ಕಟ್ಟುನಿಟ್ಟಿನ ಸುತ್ತೋಲೆಯೊಂದು ಹೊರಬಿದ್ದಿದೆ. ಕುಕ್ಕರಹಳ್ಳಿ ಕೆರೆ ಮತ್ತು ಮಾನಸಗಂಗೋತ್ರಿ ಆವರಣದಲ್ಲಿ ಈ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
![dsfdsmysore university notice after gangrape case](https://etvbharatimages.akamaized.net/etvbharat/prod-images/12894840_121_12894840_1630072964511.png)
ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಂಜೆ 6.30ರ ನಂತರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಸುರಕ್ಷಣಾ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಿಸಲಾಗಿದೆ. ವಿವಿ ಭದ್ರತಾ ಸಿಬ್ಬಂದಿಯಿಂದ ಸಂಜೆ 6 ರಿಂದ 9ರವರೆಗೆ ಗಸ್ತು ತಿರುಗಲು ವ್ಯವಸ್ಥೆ ಮಾಡಲಾಗಿದೆ. ಮಾನಸ ಗಂಗೋತ್ರಿಯ ಆವರಣದಲ್ಲಿ ಸಹ ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ಕೂರುವುದನ್ನು ನಿಷೇಧಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.
ಆಗಸ್ಟ್ 24ರ ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಪ್ರದೇಶದಲ್ಲಿ ಸ್ನೇಹಿತನ ಜೊತೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ನಡೆದಿತ್ತು. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಸಮಾಜದಲ್ಲಿ ಇಂಥದ್ದೆಲ್ಲ ನಡೆಯುತ್ತೆ... ಉತ್ತರ ಕೊಡುವುದಕ್ಕೆ ಗೃಹ ಸಚಿವರಿದ್ದಾರೆ: ಕತ್ತಿ ವಿವಾದಾತ್ಮಕ ಹೇಳಿಕೆ