ETV Bharat / state

ಮೈಸೂರು: ಅಪ್ರಾಪ್ತ ನಾದಿನಿ ಮೇಲೆ ಅತ್ಯಾಚಾರ, ಅಪರಾಧಿಗೆ 25 ವರ್ಷ ಶಿಕ್ಷೆ

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ನ್ಯಾಯಾಲಯ 25 ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಅಪ್ರಾಪ್ತೆ ನಾದಿನಿ ಮೇಲೆ ಅತ್ಯಾಚಾರ ಅಪರಾಧಿಗೆ 25 ವರ್ಷ ಶಿಕ್ಷೆ  court sentenced the convict  raping a minor  Mysore court news  ಅಪ್ರಾಪ್ತೆ ನಾದಿನಿ ಮೇಲೆ ಅತ್ಯಾಚಾರ  ಅಪರಾಧಿಗೆ 25 ವರ್ಷ ಶಿಕ್ಷೆ  ಬಾಲಕಿ ಮೇಲೆ ಅತ್ಯಾಚಾರ  25 ವರ್ಷ ಶಿಕ್ಷೆ ವಿಧಿಸಿ ಆದೇಶ  ಅತ್ಯಾಚಾರವೆಸಗಿ ಆಕೆ ಗರ್ಭಿಣಿ  ವಗರ್ಭಿಣಿಯಾಗಲು ಕಾರಣನಾದ ವ್ಯಕ್ತಿ  ನಾದಿನಿ ಜೊತೆ ದೈಹಿಕ ಸಂಪರ್ಕ
ಅಪ್ರಾಪ್ತೆ ನಾದಿನಿ ಮೇಲೆ ಅತ್ಯಾಚಾರ, ಅಪರಾಧಿಗೆ 25 ವರ್ಷ ಶಿಕ್ಷೆ
author img

By ETV Bharat Karnataka Team

Published : Dec 13, 2023, 12:57 PM IST

Updated : Dec 13, 2023, 1:15 PM IST

ಮೈಸೂರು: ಅಪ್ರಾಪ್ತ ವಯಸ್ಸಿನ ನಾದಿನಿಯ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿಯೊಬ್ಬನಿಗೆ ನಗರದ ಪೋಕ್ಸೋ ವಿಶೇಷ ನ್ಯಾಯಾಲಯ 25 ವರ್ಷಗಳ ಕಠಿಣ ಸಜೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ತಾಲೂಕಿನ ನಿವಾಸಿಯೊಬ್ಬ ಶಿಕ್ಷೆಗೊಳಗಾದ ತಪ್ಪಿತಸ್ಥನಾಗಿದ್ದು, ಈತನಿಗೆ ವಿವಾಹವಾಗಿತ್ತು. ಅಡುಗೆ ಕೆಲಸ ಮಾಡುತ್ತಿದ್ದ ಈತ ಹೆಚ್ಚಾಗಿ ತನ್ನ ಮಾವನ ಮನೆಯಲ್ಲಿಯೇ ಇರುತ್ತಿದ್ದನು. ಹೀಗೇ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ನಾದಿನಿಯ ಜೊತೆ ಸಲುಗೆಯಿಂದ ಇರುತ್ತಿದ್ದ.

2022ರ ಮಾರ್ಚ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾದಿನಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಾದ ನಂತರವೂ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ಘಟನೆಯಿಂದ ಅಪ್ರಾಪ್ತೆಯ ತಾಯಿ ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್​ಪೆಕ್ಟರ್ ಸ್ವರ್ಣ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೈ. ಮ. ಖಮ್ರೋಜ್ ಅವರು ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ.‌ ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 75 ಸಾವಿರ ರೂಪಾಯಿ ನೀಡಬೇಕು ಎಂದಿರುವ ನ್ಯಾಯಾಧೀಶರು ಆಕೆ ಐದು ಲಕ್ಷ ರೂಪಾಯಿ ಪರಿಹಾರಕ್ಕೆ ಅರ್ಹಳು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬಿ. ಜಯಂತಿ ವಾದ ಮಂಡಿಸಿದ್ದರು.

ಓದಿ: ಬೈಕ್​ಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆದ ಕಾರು: ಬೈಕ್​ ಸವಾರ ಪ್ರಾಣಾಪಾಯದಿಂದ ಪಾರು - ವಿಡಿಯೋ

Last Updated : Dec 13, 2023, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.