ETV Bharat / state

ಸಾಲು ಸಾಲು ರಜೆ ಇದ್ರೂ ಅರಮನೆ ಕಡೆ ಮುಖ ಮಾಡದ ಪ್ರವಾಸಿಗರು!

ಕೊರೊನಾ ಎರಡನೇ ಅಲೆಯ ಆತಂಕಕ್ಕೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ‌. ಅರಮನೆ ನೋಡಲು 1 ಸಾವಿರ ಮಂದಿ ಬಂದರೆ ಅದೇ ಹೆಚ್ಚಾಗಿದೆ. ಪ್ರವಾಸಿಗರನ್ನೇ ನಂಬಿದ್ದ ಟೂರಿಸ್ಟ್ ಗೈಡ್​ಗಳು‌‌ ಹಾಗೂ ಟೂರಿಸ್ಟ್ ಫೋಟೋಗ್ರಾಫರ್​ಗಳಿಗೆ ದೊಡ್ಡ ಹೊಡೆತ ಬಿದ್ದಿದೆ..

Mysore Palace
ಮೈಸೂರು ಅರಮನೆ
author img

By

Published : Apr 14, 2021, 5:48 PM IST

Updated : Apr 14, 2021, 7:36 PM IST

ಮೈಸೂರು : ಕೊರೊನಾ ಎರಡನೇ ಅಲೆ ಅಬ್ಬರದಿಂದ ಬೆದರಿದ ಪ್ರವಾಸಿಗರು ಸಾಲು ಸಾಲು ರಜೆ ನಡುವೆಯೂ ಜಿಲ್ಲೆಯ ಪ್ರವಾಸಿ ತಾಣಗಳತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದಾಗಿ ಬಹುತೇಕ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ.

ಏ.10ರಿಂದ 14ರವರೆಗೆ ಸಾಲು ಸಾಲು ರಜೆಗಳಿವೆ. ಹೀಗೆ ರಜೆ ಇರುವುದರಿಂದ ಪ್ರವಾಸಿಗರು ಮೈಸೂರಿನ ಪ್ರವಾಸಿ ತಾಣಕ್ಕೆ ಬರಬಹುದು ಎಂದು ಭಾವಿಸಲಾಗಿತ್ತು. ಆದರೆ, ಈ ಲೆಕ್ಕಚಾರವನ್ನ ಕೊರೊನಾ ಉಲ್ಟಾ ಮಾಡಿದೆ.

ಮೈಸೂರು ಅರಮನೆ

ಅರಮನೆ ನೋಡಲು ಬರುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ. ಕೊರೊನಾ ಕಡಿಮೆಯಾದಾಗ ಅರಮನೆ ವೀಕ್ಷಿಸಲು ಪ್ರತಿನಿತ್ಯ 5 ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬರುತ್ತಿದ್ದರು.

ಆದರೆ, ಕೊರೊನಾ ಎರಡನೇ ಅಲೆಯ ಆತಂಕಕ್ಕೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ‌. ಅರಮನೆ ನೋಡಲು 1 ಸಾವಿರ ಮಂದಿ ಬಂದರೆ ಅದೇ ಹೆಚ್ಚಾಗಿದೆ. ಪ್ರವಾಸಿಗರನ್ನೇ ನಂಬಿದ್ದ ಟೂರಿಸ್ಟ್ ಗೈಡ್​ಗಳು‌‌ ಹಾಗೂ ಟೂರಿಸ್ಟ್ ಫೋಟೋಗ್ರಾಫರ್​ಗಳಿಗೆ ದೊಡ್ಡ ಹೊಡೆತ ಬಿದ್ದಿದೆ.

Last Updated : Apr 14, 2021, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.