ಮೈಸೂರು: 2014ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಭಾಷಣ ಮಾಡಿದ್ದ ಮೋದಿ, ಮೈಸೂರನ್ನು ಪ್ಯಾರೀಸ್ ಮಾಡ್ತಿವಿ ಅಂದಿದ್ದರು. ಈಗ ಏನು ಮಾಡಿದ್ರು? ಎಂದು ಕಾಂಗ್ರೆಸ್ ಮುಖಂಡರು ವ್ಯಂಗ್ಯವಾಡಿದ್ದಾರೆ.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಲಕ್ಷ್ಮಣ್, ಮೋದಿ ಅವರು 2018ರಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೈಸೂರನ್ನು ಪ್ಯಾರೀಸ್ ಮಾಡುವುದಾಗಿ ಭರವಸೆ ನೀಡಿದ್ರು. ಆದರೆ ಇದುವರೆಗೂ ಅವರ ಪಕ್ಷದ ಸಂಸದರು ನಗರಕ್ಕೆ ಕಾಲಿಟ್ಟಿಲ್ಲ ಎಂದು ದೂರಿದರು.
ಎ.7ರಂದು ಮೈಸೂರಿಗೆ ಪ್ರಧಾನಿ ಮೋದಿ ಅವರು ಆಗಮಿಸಲಿದ್ದಾರೆ. ಸುಳ್ಳು ಹೇಳಲು ಮೈಸೂರಿಗೆ ಬರಬೇಡಿ. ಅಭಿವೃದ್ಧಿ ಕೆಲಸ ಮಾಡಿ ತೋರಿಸಿ. ಪೊಳ್ಳು ಭರವಸೆಗಳನ್ನು ಜನರಿಗೆ ಹೇಳಿ ಅವರನ್ನು ದಿಕ್ಕು ತಪ್ಪಿಸಬೇಡಿ ಎಂದು ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ನ ಸಿ.ಹೆಚ್. ವಿಜಯಶಂಕರ್, ಆರ್. ಮೂರ್ತಿ, ಎಐಸಿಸಿ ಕಾರ್ಯದರ್ಶಿ ಐಶ್ವರ್ಯ ಉಪಸ್ಥಿತರಿದ್ದರು.