ಮೈಸೂರು: ಲಾಕ್‌ಡೌನ್ ಸಂಪೂರ್ಣವಾಗಿ ಮುಗಿಯುವವರೆಗೆ ಬಾರ್ ಬಾಗಿಲು ತೆರೆಯಬಾರದು ಎಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಸುಣ್ಣದಕೇರಿಯಲ್ಲಿ ನಡೆದಿದೆ.
ಜಿಲ್ಲೆ ರೆಡ್ ಝೋನ್ನಲ್ಲಿರುವುದರಿಂದ ಮತ್ತೆ ಸಮಸ್ಯೆಗಳು ಎದುರಾಗಲಿದ್ದು, ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗುವವರೆಗೆ ಹಾಗೂ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸುವವರೆಗೂ ಬಾರ್ ತೆರೆಯಬಾರದು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು, ಸರ್ಕಾರದ ಸೂಚನೆಯಂತೆ ಬಾರ್‌ಗಳನ್ನು ತೆರೆಯಲಾಗುತ್ತಿದೆ. ಇದರಲ್ಲಿ ಬಾರ್ ಮಾಲೀಕರ ಪಾತ್ರವಿಲ್ಲವೆಂದು ತಿಳಿಹೇಳಿದರು. ಆದರೆ, ಇವರ ಮಾತಿಗೆ ಕಿಂಚಿತ್ತೂ ಯುವಕರು ಬೆಲೆ ಕೊಡದ ಕಾರಣ ಕೊನೆಗೆ ಠಾಣೆಗೆ ಕರೆದೊಯ್ಯಲಾಯಿತು.