ಮೈಸೂರು: ದನ ಮೇಯಿಸುತ್ತಿದ್ದ ವೃದ್ಧೆಯ ಮೇಲೆ ಕಾಡಾನೆ ಘರ್ಜಿಸುತ್ತ ದಾಳಿ ಮಾಡಿರುವ ಘಟನೆ ವೀರನಹೊಸಹಳ್ಳಿಯ ಬಳಿಯ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ವೃದ್ಧೆಯ ಕಿರುಚಾಟಕ್ಕೆ ಬೆಚ್ಚಿರುವ ಆನೆ ಮರುದಾಳಿ ಮಾಡದೆ ಓಡಿ ಹೋಗಿದೆ. ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂಟಿ ಸಲಗ ವೀರನಹೊಸಹಳ್ಳಿಯ ಅರಣ್ಯ ಪ್ರದೇಶದಿಂದ ರೈಲ್ವೆ ಕಂಬಿಗಳನ್ನು ದಾಟಿ ಸರಾಗವಾಗಿ ಕಾಡಂಚಿನ ಗ್ರಾಮಗಳಿಗೆ ಆಹಾರ ಅರಸಿ ಕಳೆದ ನಾಲ್ಕೈದು ತಿಂಗಳಿನಿಂದ ಆಗಮಿಸುತ್ತಿದೆ. ದನ, ಕರು ಆಸ್ತಿ ನಷ್ಟ ಮಾಡುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕಾಡಂಚಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರೈತರ ಹಿತಕ್ಕೆ ನೀರಾವರಿಗಾಗಿ ನಾನು ಗಲ್ಲಿಗೇರಲು ಸಿದ್ಧ: ಸಿಎಂ ಬೊಮ್ಮಾಯಿ