ETV Bharat / state

ಮೈಸೂರು: ಕೋವಿಡ್ ಪರೀಕ್ಷೆಗಳನ್ನು ಕಡಿಮೆ ಮಾಡಿದ ಜಿಲ್ಲಾಡಳಿತ

author img

By

Published : May 15, 2021, 9:39 PM IST

ಜನರು ಕೊರೊನಾ ಪರೀಕ್ಷೆಗೆ ಸ್ವಯಂ ಪ್ರೇರಿತರಾಗಿ ಬರತೋಡಗಿದ್ದು ಇದರಿಂದ ಟೆಸ್ಟಿಂಗ್ ಹೆಚ್ಚಾಗಿದೆ. ಈ ಮೂಲಕ ಪಾಸಿಟಿವ್ ಪ್ರಕರಣಗಳು ಜಾಸ್ತಿಯಾಗಿದ್ದು, ಇದರ ಜೊತೆಗೆ ಬೆಂಗಳೂರಿನಿಂದ ಸೋಂಕಿತರು ಹಳ್ಳಿ ಕಡೆಗೆ ಬರುತ್ತಿದ್ದಾರೆ. ಹೀಗಾಗಿಯೇ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು ಸಾಮೂಹಿಕ ಪರೀಕ್ಷೆ ಮಾಡುವುದು ಕಷ್ಟವಾಗಿದೆ.

ಕೋವಿಡ್ ಪರೀಕ್ಷೆ
ಕೋವಿಡ್ ಪರೀಕ್ಷೆ

ಮೈಸೂರು: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೋವಿಡ್​ನ ಸಾಮೂಹಿಕ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಅತೀ ಅಗತ್ಯವಿದ್ದರೆ ಮಾತ್ರ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಭಯಭೀತರಾದ ಜನರು, ಕೊರೊನಾ ಪರೀಕ್ಷೆಗೆ ಸ್ವಯಂ ಪ್ರೇರಿತರಾಗಿ ಬರತೋಡಗಿದ್ದು, ಇದರಿಂದ ಟೆಸ್ಟಿಂಗ್ ಹೆಚ್ಚಾಗಿದೆ. ಈ ಮೂಲಕ ಪಾಸಿಟಿವ್ ಪ್ರಕರಣಗಳು ಜಾಸ್ತಿಯಾಗಿದ್ದು, ಇದರ ಜೊತೆಗೆ ಬೆಂಗಳೂರಿನಿಂದ ಸೋಂಕಿತರು ಹಳ್ಳಿ ಕಡೆಗೆ ಧಾವಿಸುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು ಸಾಮೂಹಿಕ ಪರೀಕ್ಷೆ ಮಾಡುವುದು ಕಷ್ಟವಾಗಿದೆ.

ರಿಪೋರ್ಟರ್​​ ವಾಕ್​ ಥ್ರೂ

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯವಿದ್ದವರಿಗೆ ಮಾತ್ರ ಕೋವಿಡ್ ಪರೀಕ್ಷೆಗೆ ಮುಂದಾಗಿದ್ದು ರ್ಯಾಂಡಮ್ ಟೆಸ್ಟ್​ಗಳನ್ನು ರದ್ದುಗೊಳಿಸಿದೆ. ಕಳೆದ ತಿಂಗಳು ನಿತ್ಯ 7 ಸಾವಿರದಿಂದ 8 ಸಾವಿರ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಈಗ ಕೇವಲ 3 ಸಾವಿರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಇಲ್ಲಿನ ಕೋವಿಡ್​ ಮುಖ್ಯಸ್ಥ ಡಾ.ಚಿದಂಬರಂ ಈ ಟಿವಿ ಭಾರತ್​ಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.