ಮೈಸೂರು: ಸೀರೆ ವಶಪಡಿಸಿಕೊಂಡ ಪ್ರಕರಣದಲ್ಲಿ ಬಿಜೆಪಿಯ ಹುಣಸೂರು ಅಭ್ಯರ್ಥಿ ಹಾಗೂ ಯೋಗೇಶ್ವರ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಎಸಿಯವರಿಗೆ ಜಿಲ್ಲಾ ಕಾಂಗ್ರೆಸ್ ದೂರು ಸಲ್ಲಿಸಿದೆ.
ಕಳೆದ ಗುರುವಾರ ಸಂಜೆ ಮೈಸೂರು ನಗರದ ಹೂಟಗಳ್ಳಿ ಗೋಡೌನ್ ಬಳಿ ಬಿಜೆಪಿ ಚಿನ್ಹೆಯ ಹಾಗೂ ಯೋಗೇಶ್ವರ್ ಭಾವಚಿತ್ರವಿರುವ ಸೀರೆ ತುಂಬಿದ ಮೂಟೆಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ರು. ಅಲ್ಲದೇ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ದೂರು ದಾಖಲಿಸಲಾಗಿತ್ತು.
ಆದರೆ ದೂರನ್ನು ಆ ಗೋಡೌನ್ ಬಾಡಿಗೆ ಪಡೆದ ವ್ಯಕ್ತಿಯ ವಿರುದ್ಧ ದಾಖಲಿಸಿರುವುದು ಸರಿಯಲ್ಲ. ಬಿಜೆಪಿ ಚಿನ್ಹೆ ಇರುವ ಆ ಪಕ್ಷದ ಯೋಗೇಶ್ವರ್ ಹಾಗೂ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹೆಚ್.ವಿಶ್ವನಾಥ್ ವಿರುದ್ಧ 113(1) ರ ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರದೇಶ ಕಮಿಟಿಯ ಮಾಧ್ಯಮ ವಕ್ತಾರ ಲಕ್ಷ್ಮಣ್ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿನ ಎಸಿ ಡಾ. ವೆಂಕಟರಮಣ ಅವರಿಗೆ ದೂರು ಸಲ್ಲಿಸಿದ್ದಾರೆ.