ETV Bharat / state

ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಕೆರೆ ಮೀಸಲಿಟ್ಟ ಗ್ರಾಮಸ್ಥರು.. ಅನ್ಯ ಕಾರ್ಯಕ್ಕೆ ಈ ನೀರನ್ನ ಬಳಸಿದ್ರೆ ಬೀಳುತ್ತೆ ಕೇಸ್​​

ಗ್ರಾಮಸ್ಥರೆಲ್ಲರೂ ಸೇರಿ ಜಲಮೂಲವಾಗಿರುವ ಕೆರೆಯ ರಕ್ಷಣೆಗೆ ನಿಂತಿದ್ದಾರೆ. ಅಲ್ಲದೆ, ಈ ಸಂಬಂಧ ಪಿಡಿಓ ಮೂಲಕ ಪ್ರಕಟಣೆ ಹೊರಡಿಸಿದ್ದು, ಕೆರೆಯ ನೀರನ್ನು ಜಾನುವಾರುಗಳ ಉಪಯೋಗಕ್ಕೆ ಬಿಟ್ಟು ಅನ್ಯ ಕಾರಣಗಳಿಗೆ ಬಳಸಿದರೆ ಪೊಲೀಸ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನಾಮಫಲಕ ಹಾಕಿದ್ದಾರೆ.

ಪ್ರಾಣಿ, ಪಕ್ಷಿಗಳಿಗೆ ಕೆರೆಯನ್ನೇ ಮಿಸಲಿಟ್ಟ ಗ್ರಾಮಸ್ಥರು

author img

By

Published : Feb 24, 2022, 7:12 PM IST

Updated : Feb 24, 2022, 9:15 PM IST

ಮೈಸೂರು: ಒಂಬತ್ತು ವರ್ಷಗಳ ಹಿಂದೆ ಉಂಟಾಗಿದ್ದ ಭೀಕರ ಬರಗಾಲದಿಂದ ಎಚ್ಚೆತ್ತ ಗ್ರಾಮಸ್ಥರು, ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಬಾರದೆಂದು ಸಂಪೂರ್ಣವಾಗಿ ಕೆರೆಯ ನೀರನ್ನು ಪ್ರಾಣಿ, ಪಕ್ಷಿಗಳಿಗೆ ಮೀಸಲಿಟ್ಟಿದ್ದಾರೆ.

ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಕೆರೆ ಮೀಸಲಿಟ್ಟ ಗ್ರಾಮಸ್ಥರು

ಹೌದು, ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿ ಗ್ರಾಮದ ಕೆರೆ ಜಾನುವಾರುಗಳಿಗೆ ಬಾಯಾರಿಕೆ ನೀಗಿಸುವ ಜಲಮೂಲವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದರೂ, ನೀರಿನ ಚಿಂತೆ ದೂರು ಮಾಡಿದೆ. ಅಲ್ಲದೇ, ಕೆರೆ ನೀರು ಉಳಿಸಲು ಗ್ರಾಮಸ್ಥರು ಸ್ವಯಂ ನಿರ್ಬಂಧವೊಂದನ್ನ ಹಾಕಿಕೊಂಡಿದ್ದಾರೆ. ಈ ನೀರನ್ನು ಜನ ಬಳಸಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೆರೆ ಮುಂಭಾಗ ನೀರು ಜಾನುವಾರುಗಳ ಉಪಯೋಗಕ್ಕೆ ಮಾತ್ರ ಎಂಬ ನಾಮಫಲಕ ಅಳವಡಿಸಲಾಗಿದೆ.

ಗ್ರಾಮಸ್ಥರೆಲ್ಲರೂ ಸೇರಿ ಪಿಡಿಓ ಮೂಲಕ ಪ್ರಕಟಣೆ ಹೊರಡಿಸಿದ್ದು, ಇದರಲ್ಲಿ ಕೆರೆಯ ನೀರನ್ನು ಜಾನುವಾರುಗಳ ಉಪಯೋಗಕ್ಕೆ ಬಿಟ್ಟು ಅನ್ಯ ಕಾರಣಗಳಿಗೆ ಬಳಸಿದರೆ ಪೊಲೀಸ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನಾಮಫಲಕ ಹಾಕಲಾಗಿದೆ. ಒಂಬತ್ತು ವರ್ಷಗಳ ಹಿಂದಿನ ಭೀಕರ ಬರಗಾಲದಿಂದ ಎಚ್ಚತ್ತ ಮೊಸಂಬಾಯನಹಳ್ಳಿ ಗ್ರಾಮಸ್ಥರು, ಕೆರೆ ಸಂರಕ್ಷಿಸಿ ವರ್ಷ ಪೂರ್ತಿ ಮೂಕ ಪ್ರಾಣಿಗಳ ದಾಹ ತೀರಿಸಲು ಮುಂದಾಗಿದ್ದಾರೆ‌. ಪ್ರಾಣಿ ಪಕ್ಷಿಗಳ ದಾಹದ ಜೊತೆಗೆ ಗ್ರಾಮದ ಸುತ್ತಮುತ್ತ ಅಂತರ್ಜಲ ವೃದ್ಧಿಗೂ ಕೆರೆ ಉಪಯೋಗವಾಗುವಂತೆ ಮಾಡುತ್ತಿದ್ದಾರೆ.

ಪ್ರಾಣಿಗಳಿಗಾಗಿ ಯೋಜನೆ ರೂಪಿಸಿರುವ ಮೊಸಂಬಾಯನಹಳ್ಳಿ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ. ಮೊಸಂಬಾಯನಹಳ್ಳಿಯ ಕೆರೆ ಮಳೆ ಬಂದಾಗ, ವರುಣಾ ನಾಲೆ ತುಂಬಿ ಹರಿದಾಗ ಇಲ್ಲಿ ನೀರು ಸಂಗ್ರಹವಾಗುತ್ತದೆ. ಈ ಹಳ್ಳಿಗೆ ಕಳೆದ ಒಂಬತ್ತು ವರ್ಷಗಳ ಹಿಂದೆ ಭೀಕರ ಬರಗಾಲ ಎದುರಾಗಿತ್ತು. ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ‌ಜನರಲ್ಲದೇ, ಜಾನುವಾರುಗಳು ಕೂಡ ನೀರಿನ ಅಭಾವದಿಂದ ಕಂಗೆಟ್ಟಿದ್ದವು. ಜನರೇನು ಬೇರೆ ಬೇರೆ ಕಡೆ ಹೋಗಿ ನೀರು ಕುಡಿಯಬಹುದು. ಆದರೆ ಜಾನುವಾರುಗಳ ಸ್ಥಿತಿ ಏನು ಎಂಬ ಆಲೋಚನೆಯಿಂದ ಇದನ್ನು ಸಂರಕ್ಷಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ : ಅತಿಯಾದ್ರೆ ಅಮೃತವೂ ವಿಷ.. ಹಸಿವೆಂದು 8 ಮೊಟ್ಟೆ ನುಂಗಿ ಹೊರಗೆ ಉಗುಳಿತು ಹಾವು - ವಿಡಿಯೋ ವೈರಲ್​

ಅಂದಿನಿಂದ ಇಂದಿನವರೆಗೆ ಈ ಕೆರೆ ನೀರನ್ನು ಜಾನುವಾರುಗಳಿಗೆ ನೀರಿನ ದಾಹ ನೀಗಿಸಿಕೊಳ್ಳಲು ಮೀಸಲಿಡಲಾಗಿದೆ. ಇದರಿಂದ ಬೇಸಿಗೆ ಬಂದರೂ ಕೆರೆ ನೀರು ಸಂಪೂರ್ಣವಾಗಿ ಬತ್ತಿ ಹೋಗುವುದಿಲ್ಲ. ಅಲ್ಲದೇ ಗ್ರಾಮಸ್ಥರು ಕೂಡ ಕೆರೆ ನೀರಿನ ಬಳಸುವುದನ್ನು ಬಿಟ್ಟು, ತಮ್ಮ ಮನೆಗಳಿಗೆ ನಲ್ಲಿ ಹಾಕಿಸಿಕೊಂಡಿದ್ದಾರೆ.

Last Updated : Feb 24, 2022, 9:15 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.