ಮೈಸೂರು: ಕೊರೊನಾ ತಗ್ಗುತ್ತಿರುವುದರಿಂದ ನಂಜನಗೂಡಿಗೆ ಭಕ್ತರು ಆಗಮಿಸುತ್ತಿದ್ದು, ನಂಜುಂಡೇಶ್ವರ ಒಂದೇ ತಿಂಗಳಿನಲ್ಲಿ ಕೋಟ್ಯಧೀಶನಾಗಿದ್ದಾನೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ ಒಂದು ಕೋಟಿಗೂ (1,01,71,910 ರೂ) ಅಧಿಕ ಮೊತ್ತದ ಹಣ ಸಂಗ್ರಹವಾಗಿದೆ.
ಓದಿ: ದ.ಕ. ಜಿಲ್ಲೆಯ ಪ್ರಥಮ ಕಂಬಳಕ್ಕೆ ಸಕಲ ಸಿದ್ಧತೆ : ರಂಗೇರಲಿದೆ ವೀರ-ವಿಕ್ರಮ ಜೋಡುಕರೆ ಬಯಲು
ಇದರಲ್ಲಿ 7500 ರೂ.ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು, 1000 ಮೌಲ್ಯದ 2 ನೋಟುಗಳು ಹಾಗೂ 500 ಮೌಲ್ಯದ 11 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿಗಳು,70 ಗ್ರಾಂ ಚಿನ್ನ ಹಾಗೂ 3 ಕೆಜಿ 500 ಗ್ರಾಂ ಬೆಳ್ಳಿಯನ್ನು ಭಕ್ತರು ನಂಜುಂಡನಿಗೆ ಕಾಣಿಕೆಯಾಗಿ ಅರ್ಪಿಸಿದ್ದಾರೆ.
20ಕ್ಕೂ ಅಧಿಕ ಹುಂಡಿಗಳ ಎಣಿಕೆ ಕಾರ್ಯದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.