ETV Bharat / state

ಆಷಾಢ ಮಾಸದಲ್ಲಿ ನಾಡದೇವಿಯ ಸನ್ನಿಧಿಗೆ ಹರಿದು ಬಂತು ದಾಖಲೆಯ ₹3.5 ಕೋಟಿ ದೇಣಿಗೆ - Chamundeshwari temple hundi counting work

2,33,51,270 ರೂಪಾಯಿ (2 ಕೋಟಿ 33 ಲಕ್ಷ, 51 ಸಾವಿರದ 270 ರೂಪಾಯಿ) ಕಾಣಿಕೆ ರೂಪದಲ್ಲಿ, 270 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಹಾಗು 1,03,69,270 ರೂಪಾಯಿ ಪ್ರವೇಶ ಟಿಕೆಟ್​ನಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆದಾಯ ಬಂದಿದೆ.

Chamundeshwari temple hundi counting work
ಚಾಮುಂಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ
author img

By

Published : Jul 26, 2022, 8:41 AM IST

ಮೈಸೂರು: ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಗೆ ಮೂರುವರೆ ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ. ಇದು ದೇವಾಲಯದ ಇತಿಹಾಸದಲ್ಲೇ ದಾಖಲೆಯಾಗಿದೆ.

ನಾಡದೇವತೆಯ ದರ್ಶನಕ್ಕೆ ಈ ತಿಂಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರ ಅರ್ಪಣೆಯ ಪೈಕಿ 2,33,51,270 ರೂಪಾಯಿ ನಗದು, 270 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಇದರ ಜೊತೆಗೆ 1,03,69,270 ರೂಪಾಯಿ ಪ್ರವೇಶ ಟಿಕೆಟ್​ನಿಂದ ಸಂಗ್ರಹವಾಗಿದೆ.

"ಸೋಮವಾರ ದೇವಾಲಯದ ಆವರಣದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 250 ಮಂದಿ ಸಿಸಿಟಿವಿ ಕಣ್ಗಾವಲಿನಲ್ಲಿ ದಿನವಿಡೀ ದೇಣಿಗೆ ಎಣಿಕೆ ಕಾರ್ಯ ನಡೆಸಿದರು. ರದ್ದಾದ 500 ಮತ್ತು 1,000 ಮುಖಬೆಲೆಯ 1 ಲಕ್ಷಕ್ಕೂ ಅಧಿಕ ನೋಟ್​ಗಳು, ವಿದೇಶಿ ಕರೆನ್ಸಿಗಳು ಸಹ ಹುಂಡಿಯಲ್ಲಿ ದೊರೆತಿವೆ" ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಜೆ.ಕೃಷ್ಣ ಮಾಹಿತಿ ನೀಡಿದರು.

ಇದನ್ನೂ ಓದಿ: ಮಲೆನಾಡ ಹೆಬ್ಬಾಗಿಲಿನಲ್ಲಿದೆ ದೇಶ ಸೈನಿಕರ ಯಶೋಗಾಥೆ ಸಾರುವ ರಾಜ್ಯದ ಪ್ರಥಮ ಸೈನಿಕ ಪಾರ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.