ETV Bharat / state

Watch... ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ - ಈಟಿವಿ ಭಾರತ ಕನ್ನಡ

ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ ಮುಂದುವರೆದಿದ್ದು, ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

monkeys-in-chamundi-hill
ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ : ವಿಡಿಯೋ
author img

By

Published : Apr 25, 2023, 5:23 PM IST

ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ : ವಿಡಿಯೋ

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕೋತಿಗಳು ಕಿರಿಕಿರಿ ಉಂಟು ಮಾಡುತ್ತಿದೆ. ನಿನ್ನೆ ಕೇಂದ್ರ ಸಚಿವ ಅಮಿತ್​ ಶಾ ಮೈಸೂರಿಗೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದು, ಇದಕ್ಕೂ ಮೊದಲು ಅವರು ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಭದ್ರತಾ ದೃಷ್ಟಿಯಿಂದ ಸಾವಿರಾರು ಪೊಲೀಸ್​ ಸಿಬ್ಬಂದಿಯನ್ನು ಇಲ್ಲಿ ನೇಮಕ ಮಾಡಲಾಗಿತ್ತು. ಈ ವೇಳೆ ಇದ್ಯಾವುದಕ್ಕೂ ಕ್ಯಾರೆ ಅನ್ನದೇ ಕೋತಿಗಳು ಅತ್ತಿಂದಿತ್ತ ಓಡಾಡುತ್ತಿದ್ದವು.

ಇನ್ನು, ಇದೇ ವೇಳೆ ದೇವಾಲಯದ ಒಳಭಾಗದಲ್ಲಿ ಹೋಮ‌- ಹವನ ಮಾಡಿ ಬಳಿಕ ಉಳಿದ ವಸ್ತುಗಳನ್ನು ಒಂದು ಬುಟ್ಟಿಯಲ್ಲಿ ತುಂಬಿಸಿದ್ದರು. ಈ ವೇಳೆ, ಕೋತಿಯೊಂದು ಬುಟ್ಟಿಯಲ್ಲಿದ್ದ ವಸ್ತುಗಳನ್ನು ಕೆದಕಿ ಬಾಳೆಹಣ್ಣನ್ನು ತಿನ್ನುತ್ತಿದ್ದ ದೃಶ್ಯ ಕಂಡು ಬಂತು.

ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಭಕ್ತರು ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಾರೆ. ದೇವಾಲಯದಲ್ಲಿ ಆವರಣದಲ್ಲಿ ಕೋತಿಗಳಿದ್ದು, ಕೆಲ ಭಕ್ತರು ಈ ಕೋತಿಗಳಿಗೆ ಹಣ್ಣು ಕಾಯಿ, ಪ್ರಸಾದ ಮುಂತಾದವುಗಳನ್ನು ನೀಡುತ್ತಾರೆ.

ಬಾಳೆ ಹಣ್ಣು ಹುಡುಕಲು ಕೋತಿ ಮಾಡಿದ್ದೇನು : ದೇವಾಲಯದ ಆವರಣದ ಒಳಗೆ ಹೋಮ ನಡೆಯುವ ಸ್ಥಳದಲ್ಲಿ ಹೋಮ ನಡೆದ ಬಳಿಕ ಉಳಿದ ವಸ್ತುಗಳನ್ನು ಕಸದ ಬುಟ್ಟಿಯಲ್ಲಿ ಹಾಕಲಾಗಿತ್ತು. ಆ ಬುಟ್ಟಿಯ ಬಳಿ ಬಂದ ಮಂಗವೊಂದು ಕಸದ ಬುಟ್ಟಿಯ ಮೇಲೆ ಕುಳಿತು, ಅದರಲ್ಲಿರುವ ಕಸ ಸೇರಿದಂತೆ ಹೂವುಗಳನ್ನು ತೆಗೆದು ಹಾಕಿ ಬಾಳೆ ಹಣ್ಣನ್ನು ಹುಡುಕಿ ತಿಂದಿತು.

ಎಲ್ಲರನ್ನೂ ಗದರಿಸುವ ಕೋತಿಗಳು : ನಿನ್ನೆ ಅಮಿತ್ ಶಾ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಈ ವೇಳೆ ಅವರ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಈ ವೇಳೆ, ಕೋತಿಗಳು ದೇವಾಲಯದ ಮುಂಭಾಗದ ಕಟ್ಟಡದಿಂದ ದೇವಾಲಯದ ಗೋಪುರಕ್ಕೆ ಕೋತಿಗಳು ಸಾಲ ಸಾಲಾಗಿ ಬರುತ್ತಿದ್ದವು. ಈ ಸಂದರ್ಭದಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬರು ಕೋತಿಗಳನ್ನು ತಮ್ಮ ಬೆತ್ತದಿಂದ ಗದರಿಸಿದ ದೃಶ್ಯವೂ ಕಂಡುಬಂತು.

ಇದನ್ನೂ ಓದಿ : ಮೈಸೂರು ಚಾಮುಂಡಿ ದೇವಿಯ ದರ್ಶನ ಪಡೆದ ಕೇಂದ್ರ ಗೃಹ ಸಚಿವ ಅಮಿತ್​ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.