ಮೈಸೂರು: ಬಿಜೆಪಿ ಸರ್ಕಾರಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿದ್ದಾಗಲೇ ಈ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಒಂದು ಸರ್ವೇ ನಡೆಸಿ, ಕೇಂದ್ರ ಸರ್ಕಾರದಿಂದಲೂ ಒಪ್ಪಿಗೆ ತಂದಿದ್ದರು. 2018ರಲ್ಲಿ ಈ ಹೆದ್ದಾರಿಗೆ ಸಿದ್ದರಾಮಯ್ಯನವರು ಹಣ ಬಿಡುಗಡೆ ಮಾಡಿಸಿದ್ದರು. ಆದರೀಗ, ಬಿಜೆಪಿಯವರು ತಾವೇ ಎಲ್ಲವನ್ನೂ ಮಾಡಿದ್ದೇವೆ, ಜಾರಿಗೆ ತಂದಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಶುರುವಾಗಲಿದೆ. ಆದರೆ, ಬೆಂಗಳೂರಿಗೆ ಹೋಗಿ ಬರಲು ಜನಸಾಮಾನ್ಯರು 800 ರೂಪಾಯಿ ಟೋಲ್ ಕಟ್ಟಬೇಕಾ? ಇಷ್ಟೊಂದು ಟೋಲ್ ತೆಗೆದುಕೊಳ್ಳುವ ಅಗತ್ಯ ಏನಿದೆ? ಜನರ ಬಗ್ಗೆ ಕಾಳಜಿ ಇದ್ದರೆ ನೀವು ಟೋಲ್ ಕಟ್ಟಿ ಎಂದು ಹೇಳುತ್ತಿರಲಿಲ್ಲ. ನಿಮಗೆ ಧಮ್ ಇದ್ರೆ ಟೋಲ್ ಫ್ರೀ ಮಾಡಿ ಎಂದು ಎಂ ಲಕ್ಷ್ಮಣ್ ಸವಾಲು ಹಾಕಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅದಾನಿ, ಅಂಬಾನಿಯಂತಹ ಶ್ರೀಮಂತರನ್ನು ಇನ್ನೂ ಸಿರಿವಂತರನ್ನಾಗಿ ಮಾಡುತ್ತಿದೆ. ಮೋದಿಯವರ ಸರ್ಕಾರವು ಟೆಂಡರ್‌ಗಳನ್ನು ಅದಾನಿ ಸಮೂಹಕ್ಕೆ ನೀಡುತ್ತಿದೆ. ಎಲ್‌ಐಸಿಯನ್ನು ಅದಾನಿ ಸಮೂಹದ ಷೇರುಗಳಲ್ಲಿ ಹೂಡಿಕೆ ಮಾಡಿ ಎಂದು ಪ್ರಧಾನಿ ಮೋದಿ ಬರವಣಿಗೆಯಲ್ಲಿ ಬರೆದುಕೊಟ್ಟಿದ್ದಾರೆ. ಅದಕ್ಕಾಗಿ ಎಲ್‌ಐಸಿ ಅದಾನಿ ಷೇರುಗಳ ಮೇಲೆ ಕೋಟಿಗಟ್ಟಲೆ ಬಂಡವಾಳ ಹೂಡಿಕೆ ಮಾಡಿದೆ ಎಂದು ಆರೋಪಿಸಿದರು.
ಲೋಕಸಭೆ ಕಲಾಪದಲ್ಲಿ ಪ್ರಧಾನಿ ಮೋದಿ ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿಲ್ಲ. ಬೇರೆ ಬೇರೆ ದೇಶಗಳಲ್ಲಿ ಅದಾನಿಯ 38ಕ್ಕೂ ಹೆಚ್ಚು ಕಂಪನಿಗಳಿವೆ. 8.24 ಲಕ್ಷ ಕೋಟಿ ರೂಗಳಷ್ಟು ಅದಾನಿಯ ಸಂಪತ್ತು ಹೆಚ್ಚಾಗಲು ಮೋದಿ ಕಾರಣ ಎಂದರು.
ಮೋದಿ ಬರವಣಿಗೆಯಲ್ಲಿ ಬರೆದು ಕೊಟ್ಟಿರುವುದರಿಂದ ಎಲ್‌ಐಸಿ 90 ಸಾವಿರ ಕೋಟಿ ಹಣವನ್ನು ಅದಾನಿ ಷೇರು ಮಾರುಕಟ್ಟೆಯಲ್ಲಿ ಹಾಕಿದ್ದಾರೆ. ಆ ದುಡ್ಡು ಮತ್ತು ಕೆಆರ್‌ಎಸ್ ನೀರಿನಲ್ಲಿ ಹಾಕಿದ ದುಡ್ಡು ಎರಡೂ ಒಂದೇ. ಈಗಾಗಲೇ 9 ಏರ್‌ಪೋರ್ಟ್‌ಗಳನ್ನು ಅದಾನಿಗೆ ಮಾರಿದ್ದಾರೆ. ಹೀಗೇ ಬಿಟ್ಟರೆ ಎಲ್ಲವನ್ನೂ ಮಾರಿ ಬಿಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಬರುವ ಮೊದಲು ನಮ್ಮ ಕಾಂಗ್ರೆಸ್ ಸರಕಾರ ಇದ್ದಾಗ ಬೆಂಗಳೂರು-ಮೈಸೂರು ಹೆದ್ದಾರಿ ಕುರಿತಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇದ್ದಾಗಲೇ ಹೈವೇ ಕುರಿತು ಒಂದು ಸರ್ವೇ ನಡೆಸಿ ಅದರ ಕುರಿತು ಕೇಂದ್ರ ಸರ್ಕಾರದಿಂದಲೂ ಒಪ್ಪಿಗೆ ತಂದಿದ್ದರು. 2018 ರಲ್ಲಿ ಈ ಹೆದ್ದಾರಿಗೆ ಸಿದ್ದರಾಮಯ್ಯ ಹಣ ಬಿಡುಗಡೆ ಮಾಡಿಸಿದ್ದರು. ಈಗ ಅದನ್ನು ನಾವು ಮಾಡಿದ್ದೇವೆ, ನಾವು ಜಾರಿಗೆ ತಂದಿದ್ದೇವೆ ಎನ್ನುತ್ತ ಬಿಜೆಪಿಯವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು.
ಟೀಚರ್ ಆತ್ಮಹತ್ಯೆಗೆ ಕಾರಣವೇನು?: ಸಿ.ಟಿ.ರವಿಯವರೇ, ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೀರಿ. ನೀವು ಮೊದಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿ. ನಿಮ್ಮ ಊರಿನ ಒಬ್ಬ ಟೀಚರ್ ಕೆಆರ್‌ಎಸ್‌ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದನ್ನು ನಾನು ಹೇಳುತ್ತಿಲ್ಲ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಆತ್ಮಹತ್ಯೆಯ ಬಗ್ಗೆ ದಯಮಾಡಿ ಕುಮಾರಸ್ವಾಮಿಯವರಿಗೆ ಮೊದಲು ಅದಕ್ಕೆ ಕಾರಣ ಏನೆಂದು ಉತ್ತರ ನೀಡಲಿ. ಆ ಮೇಲೆ ನಾನು ನೀವು ನೀಡಿರುವ ಮೊಕದ್ದಮೆಗೆ ಕೋರ್ಟ್‌ನಲ್ಲಿ ಬಂದು ಉತ್ತರ ನೀಡುತ್ತೇನೆ ಎಂದು ಸಿ.ಟಿ.ರವಿಗೆ ಸವಾಲೆಸೆದರು.
ಇದನ್ನೂ ಓದಿ:ದೇವರ ತಲೆಯಿಂದ ಬಲಬದಿಗೆ ಬಿದ್ದ ಪ್ರಸಾದ.. ಕುಮಾರಸ್ವಾಮಿಗೆ ಅದೃಷ್ಟ ಎನ್ನುತ್ತಿದ್ದಾರೆ ಜೆಡಿಎಸ್ ಕಾರ್ಯಕರ್ತರು