ಮೈಸೂರು: ಬಿಜೆಪಿಯವರು ಪೊಳ್ಳು ಹಿಂದೂಗಳು. ನಾವೇ ನಿಜವಾದ ಹಿಂದೂಗಳು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಎಂಬ ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿರುವಾಗಲೇ ಹಿಂದೂಗಳ ಹತ್ಯೆಯಾಗಿದೆ. ಕಾಂಗ್ರೆಸ್ ನ 70 ವರ್ಷದ ಅವಧಿಯಲ್ಲಿ ಹತ್ಯೆಯಾಗಿಲ್ಲ. ತಂದೆ ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯದಲ್ಲಿ ಹಿಂದೂಗಳ ಹತ್ಯೆಗಳಾಗಿಲ್ಲ. ಬಿಜೆಪಿ ಅಧಿಕಾರವಿರುವಾಗಲೇ ಹತ್ಯೆಯಾಗುತ್ತಿದೆ ಎಂದು ಕಿಡಿಕಾರಿದರು.
ಜಾತಿ ಧರ್ಮಗಳ ಮಧ್ಯೆ ಕೋಮುಗಲಭೆ ಹಬ್ಬಿಸಿ, ಅಧಿಕಾರಕ್ಕೆ ಬರುವುದೇ ಬಿಜೆಪಿ ಮುಖ್ಯ ಉದ್ದೇಶವಾದರೆ, ಎಲ್ಲಾ ಧರ್ಮಗಳನ್ನು ಒಗ್ಗೂಡಿಸಿ ಶಾಂತಿ ನೆಮ್ಮದಿ ಕಾಪಾಡುವುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ಆದರೆ, ಹಿಂದೂಗಳೆಲ್ಲ ಬಿಜೆಪಿ ಪರವಿಲ್ಲ. ಹಿಂದೂಗಳ ರಕ್ಷಣೆ ಬಿಜೆಪಿಯಿಂದ ಅಸಾಧ್ಯ.
ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.