ಮೈಸೂರು : ಕೋವಿಡ್‌ನಂತಹ ಪರಿಸ್ಥಿತಿ ನಿರ್ವಹಿಸುವಾಗ ಗೊಂದಲ, ಭಿನ್ನಾಭಿಪ್ರಾಯ ಸಹಜ. ಇದು ಹೆಚ್ಚು ದಿನ ಇರುವುದಿಲ್ಲ. ಬೇಗ ಬಗೆಹರಿಯಲಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ತನ್ವಿರ್ ಸೇಠ್ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವಿರ್ ಸೇಠ್, ಮೈಸೂರು ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ನಡೆಯುತ್ತಿರುವ ಜಟಾಪಟಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ತನ್ವಿರ್ ಸೇಠ್, ಕೋವಿಡ್‌ನಂತಹ ಪರಿಸ್ಥಿತಿ ನಿಭಾಯಿಸುವಾಗ ಭಿನ್ನಾಭಿಪ್ರಾಯ ಇರುವುದು ಸಹಜ. ಇದು ಬಹಳ ದಿನ ನಡೆಯುವುದಿಲ್ಲ, ಬೇಗ ಬಗೆಹರಿಯಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೇಠ್, ಜಿಲ್ಲಾಡಳಿತ, ಜಿಲ್ಲಾ ಸಚಿವರು ಹಾಗೂ ಸರ್ಕಾರಕ್ಕೆ ಈಗಾಗಲೇ ನನ್ನ ಕ್ಷೇತ್ರದ ಆಸ್ಪತ್ರೆಗಳಿಗೆ 50 ಲಕ್ಷ ಔಷಧಿ ಬೇಕೆಂದು ಪತ್ರ ಬರೆದಿದ್ದೇನೆ.
ನಮ್ಮ ನಿರೀಕ್ಷೆಗಳು ಬಹಳ ಇವೆ. ಆದರೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಸಚಿವರು ಹಂತ ಹಂತವಾಗಿ ಸಹಕಾರ ನೀಡುತ್ತಿದ್ದು, ನಾವು ಸಹ ಅವರಿಗೆ ಸಹಕಾರ ನೀಡುತ್ತಿದ್ದೇವೆ. ಎಲ್ಲಾ ಕೆಲಸಗಳು ನಡೆಯುತ್ತಿವೆ ಎಂದು ಶಾಸಕರು ತಿಳಿಸಿದರು.