ಮೈಸೂರು: ಹುಟ್ಟುಹಬ್ಬದ ನಿಮಿತ್ತ ಮಾಜಿ ಸಚಿವ ಜಿ.ಟಿ.ದೇವೇಗೌಡ, ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ಗೆ ಹೂವಿನ ಹಾರ ಹಾಕಿ ಶುಭಾಶಯ ಕೋರಿದ್ದಾರೆ.
ಇಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒಡನಾಡಿ ಸೇವಾ ಸಂಸ್ಥೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಾಜಿ ಸಚಿವ ಹಾಗೂ ಹಾಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಲ್ಲಿಗೆ ಹೋಗಿ ಹೂವಿನ ಹಾರ ಹಾಕಿ ಶುಭಾಶಯ ಕೋರಿದರು.
ಅನರ್ಹಗೊಂಡ ಶಾಸಕ ಹೆಚ್.ವಿಶ್ವನಾಥ್ ಶ್ರೀನಿವಾಸ್ ಪ್ರಸಾದ್ ಮೂಲಕವೇ ಬಿಜೆಪಿ ಸೇರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಜಿ.ಟಿ.ದೇವೇಗೌಡರ ಈ ಭೇಟಿ ಹಲವು ಅನುಮಾನಗಳಿಗೆ ಕಾರಣವಾಗಿದೆ.