ಮೈಸೂರು: ಮೈಸೂರಿನಿಂದ 75 ಮಂದಿ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ದೆಹಲಿಗೆ ಹೋಗಿ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಇವರಲ್ಲಿ ಗ್ರಾಮೀಣ ಪ್ರದೇಶದ 13 ಮಂದಿ ಇದ್ದಾರೆ. ಹೆಚ್.ಡಿ ಕೋಟೆ 6, ಬನ್ನೂರಲ್ಲಿ ಒಬ್ಬರನ್ನು ಪಿರಿಯಾಪಟ್ಟಣದಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ದೆಹಲಿ, ಬೆಂಗಳೂರಿನಲ್ಲಿ ತಲಾ ಇಬ್ಬರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಮೈಸೂರಿನ ಒಟ್ಟು 75 ಮಂದಿಯ ಮಾಹಿತಿ ಇದ್ದು, ಯಾರೊಬ್ಬರಿಗೂ ಸೋಂಕು ತಗುಲಿಲ್ಲ ಎಂದು ತಿಳಿಸಿದರು.
ಇನ್ನು ಸೋಂಕು ತಗುಲಿಲ್ಲವಾದರೂ ಮುಂಜಾಗ್ರತಾ ಕ್ರಮದಿಂದ ಅವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಸಚಿವರು ಮಾಹಿತಿ ಒದಗಿಸಿದರು.