ಮೈಸೂರು : ಕೆಲವರಿಗೆ ಸದಾ ಮಾತನಾಡುವ ಚಟ, ಆ ಮೂಲಕ ಪ್ರಚಾರದಲ್ಲಿರುವ ಹುಚ್ಚು , ಅದಕ್ಕೆ ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ವ್ಯಂಗ್ಯವಾಡಿದ್ದಾರೆ .
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ 4 ತಿಂಗಳುಗಳಿಂದ ಯತ್ನಾಳ್ ದಿನಕ್ಕೊಂದು ಹೇಳಿಕೆ ನಿಡುತ್ತಿದ್ದಾರೆ. ಅವರು ಹೇಳಿದ ಒಂದೇ ಒಂದು ಮಾತು ಸಹ ನಡೆದಿಲ್ಲ. ಅವರಿಗೆ ಮಾತನಾಡುವ ಚಟ ಅಷ್ಟೇ. ಅವರು ಹೇಳಿದ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಅವರ ಹಿಂದೆ ಬೆಂಬಲ ಕೊಡುವವರು ಯಾರು ಇಲ್ಲ. ಯತ್ನಾಳ್ ತಮ್ಮ ಅಸ್ತಿತ್ವಕ್ಕಾಗಿ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ, ಅವರನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಬಾರದು ಎಂದರು .
ಇನ್ನು ಯಡಿಯೂರಪ್ಪ ಸರ್ಕಾರ ಡಕೋಟಾ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಅವರದೇ ಒಂದು ಡಕೋಟಾ ವಿರೋಧ ಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ , ಯಡಿಯೂರಪ್ಪ ಕೊರೊನಾ ಸಂದರ್ಭದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದರು. ಜೊತೆಗೆ ಯಡಿಯೂರಪ್ಪ ಜಾಮೀನು ಮೇಲೆ ಇದ್ದಾರೆ ಎಂಬ ಹೇಳಿಕೆಗೆ ಯಾವ ರಾಜಕಾರಣಿಗಳಿಗೆ ಎಷ್ಟೊಂದು ವೈಯಕ್ತಿಕ ವಿಚಾರಗಳು ಇರುತ್ತವೆ. ಯಾವ ರಾಜಕಾರಣಿ, ಜಾಮೀನು ಮೇಲೆ ಇಲ್ಲ ಹೇಳಿ ಎಂದರು .
ಓದಿ : ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ರೂಪಾಯಿ: ಕಾಂಗ್ರೆಸ್ ಮುಖಂಡೆ ಕುಳಾಯಿ ಘೋಷಣೆ
ಬುಧವಾರ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಪಟ್ಟಿ ಪ್ರಕಟವಾಗಲಿದ್ದು, ಆ ನಂತರ ಜೆಡಿಎಸ್ ಜೊತೆ ಮೈತ್ರಿಯ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.