ETV Bharat / state

ಮಂತ್ರಿಗಳು ಶಾಸಕರಿಗೆ ಸ್ಪಂದಿಸದಿದ್ದರೆ ಸಿಎಂ ಮಧ್ಯಪ್ರವೇಶ ಮಾಡುತ್ತಾರೆ: ಎಸ್.ಟಿ.ಸೋಮಶೇಖರ್ - Minister ST Somashekhar

ಸಿಎಂ ಹಣ ಬಿಡುಗಡೆ ಮಾಡಿದರೂ‌ ಆರ್​ಡಿಪಿಆರ್ ಬಿಡುಗಡೆ ಮಾಡಿಲ್ಲವೆಂದು ದೂರಿದ್ದಾರೆ. ಅದಕ್ಕೆ ಸಿಎಂ ಮಧ್ಯಪ್ರವೇಶ‌ ಮಾಡಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ ಎಂದು ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು.

Minister ST Somashekhar
ಅಧಿಕಾರಿಗಳೊಂದಿಗೆ ಸಚಿವ ಎಸ್.ಟಿ.ಸೋಮಶೇಖರ್ ಸಭೆ
author img

By

Published : Apr 5, 2021, 2:25 PM IST

ಮೈಸೂರು: ಮಂತ್ರಿಗಳು ಶಾಸಕರಿಗೆ ಸ್ಪಂದಿಸದಿದ್ದರೆ, ಸಿಎಂ ಮಧ್ಯಪ್ರವೇಶ ಮಾಡುತ್ತಾರೆ. ಅದು ಸಿಎಂ ಪರಮಾಧಿಕಾರ ಎಂದು ರಾಜ್ಯಪಾಲರಿಗೆ ಈಶ್ವರಪ್ಪ ಪತ್ರ ಪ್ರಕರಣಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಮಾರ್ಮಿಕವಾಗಿ ಉತ್ತರ ನೀಡಿದರು.

ಇಂದು ಅಧಿಕಾರಿಗಳೊಂದಿಗಿನ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪ್ರಕರಣದಲ್ಲಿ ಕೆಲವು ಶಾಸಕರು ದೂರು ನೀಡಿದ್ದಾರೆ. ಸಿಎಂ ಹಣ ಬಿಡುಗಡೆ ಮಾಡಿದರೂ‌ ಆರ್​ಡಿಪಿಆರ್ ಅಧಿಕಾರಿಗಳು ಬಿಡುಗಡೆ ಮಾಡಿಲ್ಲವೆಂದು ದೂರಿದ್ದಾರೆ. ಅದಕ್ಕೆ ಸಿಎಂ ಮಧ್ಯಪ್ರವೇಶ‌ ಮಾಡಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ ಎಂದು ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು.

ಮೈಮುಲ್ ಅಕ್ರಮ ಆರೋಪ ಪ್ರಕರಣಕ್ಕೆ ಪ್ರತಿಕ್ರಿಯಿಸಿ, 250 ಜನರ ಕೆಲಸವನ್ನು ತಡೆಯಲು ಪ್ರಯತ್ನಿಸಿದರು. ಕೋರ್ಟ್​‌ನಲ್ಲಿ ಏನಾಯ್ತು? ಎಂದು ಶಾಸಕ ಸಾರಾ ಮಹೇಶ್​ಗೆ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಆದರೆ, ಯಾವುದೇ ಪ್ರವಾಸಿ ತಾಣಗಳನ್ನು ಬಂದ್ ಮಾಡುವುದಿಲ್ಲ. ಸಚಿವ ಸುಧಾಕರ್​ಗೆ 1 ಲಕ್ಷ ಕೋವಿಡ್ ಲಸಿಕೆಯನ್ನು ಕಳುಹಿಸುವಂತೆ ಮನವಿ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಮೇ ಅಂತ್ಯದವರೆಗೆ ಕೋವಿಡ್ ಸ್ಫೋಟವಾಗಲಿದೆ: ಡಾ.ಕೆ.ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.