ETV Bharat / state

ಕರ್ನಾಟಕದಲ್ಲಿ ಕಾಂಗ್ರೆಸ್​​​ ಅಸ್ತಿತ್ವ ಉಳಿಸಿಕೊಳ್ಳಲು ಹಿಜಾಬ್ ವಿವಾದ ಸೃಷ್ಟಿಸಿದೆ: ಸಚಿವ ನಾರಾಯಣಗೌಡ - ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಚಿವ ನಾರಾಯಣಗೌಡ ಹೇಳಿಕೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜಕೀಯ ಮಾಡಲು ಈ ರೀತಿ ಮಾತನಾಡುತ್ತಾರೆ. ಇದನ್ನೆಲ್ಲ ಬಿಡಬೇಕು, ಅನಾವಶ್ಯಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ. ವೋಟ್ ಬ್ಯಾಂಕ್‌ಗಾಗಿ ಈ ರೀತಿ ವಿವಾದಗಳನ್ನ ಕಾಂಗ್ರೆಸ್ಸಿನವರು ಸೃಷ್ಟಿ ಮಾಡುತ್ತಿದ್ದಾರೆ ಎಂದು ಸಚಿವ ನಾರಾಯಣಗೌಡ ಆರೋಪಿಸಿದರು.

ಸಚಿವ ನಾರಾಯಣಗೌಡ
ಸಚಿವ ನಾರಾಯಣಗೌಡ
author img

By

Published : Mar 27, 2022, 10:30 PM IST

ಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಹಿಜಾಬ್ ವಿವಾದ ಸೃಷ್ಟಿಸಿದೆ ಎಂದು ಸಚಿವ ನಾರಾಯಣಗೌಡ ಕಾಂಗ್ರೆಸ್​​ ವಿರುದ್ಧ ಹರಿಹಾಯ್ದಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ಸೃಷ್ಟಿಸಿದ್ದೇ ಕಾಂಗ್ರೆಸ್. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹಿಜಾಬ್ ವಿವಾದ ಸೃಷ್ಟಿಸಿದೆ ಎಂದು ದೂರಿದರು.

ಕಾಂಗ್ರೆಸ್ ವಿರುದ್ಧ ಸಚಿವ ನಾರಾಯಣಗೌಡ ವಾಗ್ದಾಳಿ

ಕಾಂಗ್ರೆಸ್​​ನವರು ಮಾಡಿರುವ ನಿಯಮಗಳನ್ನ ನಾವು ಮುಂದುವರೆಸಿದ್ದೇವೆ : ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲ ವಿಚಾರದಲ್ಲೂ ರಾಜಕೀಯ ಲಾಭ ಪಡೆಯಲು ಹೋಗುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳ ಬಳಿ ವ್ಯಾಪಾರ ವಿಚಾರ ಬಂದಿರುವುದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಕಾಂಗ್ರೆಸ್​​ನವರು ಮಾಡಿರುವ ನಿಯಮಗಳನ್ನ ಮುಂದುವರೆಸಿದ್ದೇವೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಈ ನಿಯಮ ಬಂದಿರುವುದು. ನಾವು ಹೊಸದಾಗಿ ಯಾವುದನ್ನು ಮಾಡಿಲ್ಲ. ಸಿದ್ದರಾಮಯ್ಯ ಅವರು, ರಾಜಕೀಯ ಮಾಡಲು ಈ ರೀತಿ ಮಾತನಾಡುತ್ತಾರೆ. ಇದನ್ನೆಲ್ಲ ಬಿಡಬೇಕು, ಅನಾವಶ್ಯಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ. ವೋಟ್ ಬ್ಯಾಂಕ್‌ಗಾಗಿ ಈ ರೀತಿ ವಿವಾದಗಳನ್ನ ಕಾಂಗ್ರೆಸ್ಸಿನವರು ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನನ್ನ ಕಂಡರೆ ಸುರೇಶ್‌ಗೌಡನಿಗೆ ಹೊಟ್ಟೆ ಉರಿ : ಮಂಡ್ಯದಲ್ಲಿ ಸಚಿವ ನಾರಾಯಣಗೌಡ ಏನು ಕೆಲಸ ಮಾಡುತ್ತಿಲ್ಲ ಎಂಬ ಶಾಸಕ ಸುರೇಶ್​​​ಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನನ್ನ ಕಂಡರೆ ಸುರೇಶ್‌ಗೌಡನಿಗೆ ಹೊಟ್ಟೆ ಉರಿ, ನಾನು ಸಚಿವನಾಗಿರುವುದನ್ನು ಅವರಿಗೆ ಸಹಿಸುವುದಕ್ಕೆ ಆಗುತ್ತಿಲ್ಲ. ದೇವೇಗೌಡರಿಗೆ ಹತ್ತಿರ ಆಗೋದಕ್ಕೆ ನನ್ನನ್ನ ಬೈತಾರೆ. ನನ್ನನ್ನ ಬೈದರೆ, ದೇವೇಗೌಡರು ಸುರೇಶ್‌ಗೌಡರಿಗೆ ಏನೋ ಕೊಡುಬಹುದು ಅನ್ಸುತ್ತೆ. ಅದಕ್ಕೆ ನನ್ನ ಮೇಲೆ ಸುರೇಶ್ ಗೌಡ ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರು.

ಸುರೇಶ್‌ಗೌಡ ತನ್ನ ಕೆಲಸ ಮಾಡಿಸಿಕೊಳ್ಳಲು ನನ್ನ ಹತ್ತಿರ ಬರುತ್ತಾರೆ. ನನ್ನ ಏಳಿಗೆ ಕಂಡರೆ ಅವರಿಗೆ ಸಹಿಸುವುದಕ್ಕೆ ಆಗುವುದಿಲ್ಲ. ನನ್ನ ತರ ಸಚಿವನಾಗಬೇಕು ಅಂತಾ ಆಸೆ ಇದೆ. ಆದರೆ ಸಚಿವನಾಗೋದಕ್ಕೆ ಆಗುತ್ತಿಲ್ಲ. ಅದಕ್ಕೆ ನನ್ನ ಮೇಲೆ ಹೊಟ್ಟೆ ಉರಿ ಆಗಿ, ತಲೆ ಗಿರ್ ಅನ್ನುತ್ತೆ ಸುರೇಶ್ ಗೌಡನಿಗೆ ಎಂದು ವಾಗ್ದಾಳಿ ನಡೆಸಿದರು.

ನಾನು ಮಂಡ್ಯ ಜಿಲ್ಲೆಯಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸ ಅವರಿಗೆ ಸಹಿಸೋಕೆ ಆಗುತ್ತಿಲ್ಲ. ನನ್ನ ಕ್ಷೇತ್ರಕ್ಕೆ ಮಾತ್ರ ನಾನು ಸೀಮಿತವಾಗಿಲ್ಲ. ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸುರೇಶ್‌ಗೌಡರ ಕ್ಷೇತ್ರ ನಾಗಮಂಗಲಕ್ಕೆ ಏತ ನೀರಾವರಿ, ಕುಡಿಯುವ ನೀರಿನ ಕೆಲಸ ಮಾಡಿದ್ದೇವೆ. ಅದನ್ನ ಸುರೇಶ್‌ಗೌಡ ಮೊದಲು ತಿಳಿದು ಮಾತನಾಡಲಿ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.