ಮೈಸೂರು: ಕೊರೊನಾ ಸಂದರ್ಭದಲ್ಲಿ ಇಡೀ ವ್ಯವಸ್ಥೆಯೇ ಅದರ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಇಂಥಾ ಸಂದರ್ಭದಲ್ಲಿ ವೈಭವ ದಸರಾ ಮಾಡಿದರೆ ಅವರು ಮತ್ತಷ್ಟು ಒತ್ತಡಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ವ್ಯವಸ್ಥೆಯೇ ಕುಸಿದು ಹೋಗುತ್ತದೆ ಎಂಬ ಭಯದಿಂದ ಈ ಬಾರಿ ಸರಳ ಸಾಂಪ್ರದಾಯಿಕ ದಸರಾಗೆ ಸೀಮಿತಗೊಳಿಸಿದ್ದೇವೆ ಎಂದು ಸಚಿವ ಸಿ.ಟಿ ರವಿ ಹೇಳಿದರು.
ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ, ಸರಳ ದಸರಾ ಮತ್ತು ಸಾಂಪ್ರದಾಯಿಕ ದಸರಾವನ್ನು ಈ ಸಂದರ್ಭದಲ್ಲಿ ಮಾಡಲು ಸರ್ಕಾರ ನಿರ್ಧರಿಸಿದ್ದು , ಮೊದಲು ಜೀವ ನಂತರ ಜೀವನ ಆದ್ದರಿಂದ 2000 ಜನರು ಸೇರಲು ಅನುಮತಿ ಕೇಳಿದ್ದೇವೆ ಕೊಟ್ಟರೆ ಅಷ್ಟು ಜನ ಸೇರಿಸುತ್ತೇವೆ ಇಲ್ಲ ಎಂದರೆ ಸರಳವಾಗಿ ಆಚರಿಸುತ್ತೇವೆ ಎಂದರು.
ಈ ಬಗ್ಗೆ ಸರ್ಕಾರವೇ ತೀರ್ಮಾನ ಮಾಡಿದ್ದು ಜನರನ್ನು ಕೋವಿಡ್ ನಿಂದ ಹೊರತರಲು ಅದ್ದೂರಿಯಾಗಿ ಆಚರಿಸಬೇಕು ಎಂದು ಯೋಚಿಸಿದ್ದೆವು ಆದರೆ ಕೋವಿಡ್ ಸಂದರ್ಭದಲ್ಲಿ ಇಡೀ ವ್ಯವಸ್ಥೆಯೇ ಕೊರೊನಾ ನಿಯಂತ್ರಣಕ್ಕೆ ಶ್ರಮ ಹಾಕಿದ್ದು, ಇದಕ್ಕಾಗಿ ಹಗಲಿರುಳು ಶ್ರಮಿಸಿದ್ದೇವೆ ಇಂಥಹ ಸಂದರ್ಭದಲ್ಲಿ ಅವರ ಮೇಲೆ ಮತ್ತೆ ಒತ್ತಡ ಹಾಕುವುದು ಬೇಡ ಎಂಬ ಕಾರಣಕ್ಕಾಗಿ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದು, ಕೇವಲ ಚಾಮುಂಡಿ ಬೆಟ್ಟ ಮತ್ತು ಅರಮನೆಯಲ್ಲಿ ಮಾತ್ರ ಸರಳವಾಗಿ ದಸರಾ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.