ಮೈಸೂರು: ಹೆಚ್ಚಿನ ಹಣಕ್ಕೆ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪ್ ಮೇಲೆ ದಾಳಿ ಮಾಡಿದ ಆರೋಗ್ಯ ಅಧಿಕಾರಿಗಳ ತಂಡ ಮಾಲೀಕನಿಗೆ ದಂಡ ವಿಧಿಸಿದೆ.
![ಮೆಡಿಕಲ್ ಶಾಪ್ಗೆ ದಂಡ](https://etvbharatimages.akamaized.net/etvbharat/prod-images/kn-mys-7-medical-shop-raid-news-7208092_26032020210014_2603f_1585236614_832.jpg)
ಜಿಲ್ಲೆಯ ನಂಜನಗೂಡು ಪಟ್ಟಣದ ಜೈ ಹನುಮಾನ್ ಮೆಡಿಕಲ್ ಶಾಪ್ ನಲ್ಲಿ 60 ಬೆಲೆಯ ಮಾಸ್ಕ್ ಗಳನ್ನು 100 ರೂಪಾಯಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಇನ್ನು ಮುಂದೆ ಹೆಚ್ಚಿನ ದರಕ್ಕೆ ಮಾಸ್ಕ್ ಗಳನ್ನು ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.