ETV Bharat / state

ವಿವಾಹಿತ ಪ್ರೇಮಿಗಳ ಪ್ರೇಮವಿಚಾರ ಬಹಿರಂಗ:ಆತ್ಮಹತ್ಯೆ - kannadanews

ವಿವಾಹಿತ ಪ್ರೇಮಿಗಳ ಪ್ರೇಮವಿಚಾರ ಬಹಿರಂಗಗೊಂಡಿದ್ದಕ್ಕೆ ಹೆದರಿ ವಿವಾಹಿತರಿಬ್ಬರು ಒಟ್ಟಿಗೆ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಪ್ರೇಮವಿಚಾರ ಬಹಿರಂಗಗೊಂಡಿದ್ದಕ್ಕೆ ಹೆದರಿ ವಿವಾಹಿತರಿಬ್ಬರು ಆತ್ಮಹತ್ಯೆ
author img

By

Published : Jul 2, 2019, 11:14 AM IST

Updated : Jul 2, 2019, 11:25 AM IST

ಮೈಸೂರು: ವಿವಾಹಿತ ಪ್ರೇಮಿಗಳ ಪ್ರೇಮವಿಚಾರ ಬಹಿರಂಗಗೊಂಡಿದ್ದಕ್ಕೆ ಹೆದರಿ ಇಬ್ಬರು ಜೊತೆಯಾಗಿಯೇ ನೇಣಿಗೆ ಶರಣಾಗಿರುವ ಘಟನೆ ಮೈಸೂರು ಹೊರವಲಯದಲ್ಲಿ ನಡೆದಿದೆ.

ನೇಣಿಗೆ ಶರಣಾದ ವಿವಾಹಿತ ಪ್ರೇಮಿಗಳನ್ನು ಪ್ರೇಮ್​ ಕುಮಾರ್​ (34), ಸುಷ್ಮಿತಾ (35) (ಇಬ್ಬರ ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿ ಇಬ್ಬರಿಗೂ ಮಕ್ಕಳಿದ್ದಾರೆ ಈ ಇಬ್ಬರು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರ ಅಕ್ರಮ ಸಂಬಂಧದ ವಿಚಾರ ತಿಳಿದ ಕುಟುಂಬಸ್ಥರು ಇಬ್ಬರನ್ನೂ ಕರೆಸಿ ರಾಜಿ ಪಂಚಾಯ್ತಿ ಮಾಡಿ ಎಚ್ಚರಿಕೆ ನೀಡಿದ್ದರು. ಈ ನಡುವೆ ಪ್ರೇಮ್​ ಕುಮಾರ್ ತನ್ನ ಪತ್ನಿಯನ್ನು ಊರಿಗೆ ಕಳುಹಿಸಿ ಸುಷ್ಮಿತಾ ಮನೆಗೆ ಬಂದಿದ್ದಾನೆ. ಇದನ್ನು ತಿಳಿದ ಅಕ್ಕ ಪಕ್ಕದವರು ಇಬ್ಬರು ಒಟ್ಟಿಗೆ ಮನೆಯೊಳಗೆ ಇದ್ದಾಗ ಆ ಮನೆಯ ಮುಂಭಾಗದ ಬಾಗಿಲಿಗೆ ಲಾಕ್ ಹಾಕಿಕೊಂಡು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ.

ಇದರಿಂದ ಗಾಬರಿಗೊಂಡ ಇಬ್ಬರು ಮನೆಯೊಳಗೆ ಒಂದೇ ಹಗ್ಗದಿಂದ ನೇಣಿಗೆ ಶರಣಾಗಿದ್ದಾರೆ. ನಂತರ ಪೋಲಿಸರು ಬಂದು ಎಷ್ಟೇ ಬಾಗಿಲು ಬಡಿದರು ಬಾಗಿಲು ತೆಗೆಯದ ಕಾರಣ ಬಾಗಿಲನ್ನು ಹೊಡೆದು ನೋಡಿದಾಗ ಇಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Intro:Body:

2 IMG-20190702-WA0003.jpg   

close

Conclusion:
Last Updated : Jul 2, 2019, 11:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.