ಮೈಸೂರು: ವಿಪರೀತ ಕಿರುಕುಳದಿಂದ ಬೇಸತ್ತು, ಮನೆಬಿಟ್ಟು ಹೋಗುತ್ತೀನಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಪ್ರಿಯಕರ ಪ್ರಿಯತಮೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದ ಘಟನೆ ಮೈಸೂರು ತಾಲ್ಲೂಕಿನ ಬೆಳವಾಡಿಯಲ್ಲಿ ನಡೆದಿದೆ.
ಬೆಳವಾಡಿಯಲ್ಲಿ 25 ವರ್ಷದ ಯುವತಿಯ ಮೇಲೆ ಕಿರಣ್ (27) ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ.
ಪ್ರಕರಣದ ವಿವರ
ಹೆಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಯುವತಿ ಪತಿಯನ್ನು ತೊರೆದು ಕಳೆದ 8 ತಿಂಗಳಿನಿಂದ ಅತ್ತೆಯ ಮಗ ಕಿರಣ್ ಜತೆ ವಾಸವಿದ್ದಳು. ಆದರೆ ಕಿರಣ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಆಕೆ ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಕಿರಣ್ ಆಕೆಯ ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ವಿರೋಧದ ನಡುವೆ ಪ್ರೀತಿಸಿ ಮದುವೆ; ಪತ್ನಿ ಕೊಂದು ನೇಣಿಗೆ ಶರಣಾದ ಪತಿ