ಮೈಸೂರು : ಉಡ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೋವಿ ಕಾಲೋನಿ ನಿವಾಸಿ ರಾಮಾಚಾರಿ ಬಂಧಿತ ಆರೋಪಿ. ಬಂಧಿತ ವ್ಯಕ್ತಿ ತಾನು ಮಾಡುತ್ತಿದ್ದ ಹಂದಿ ಸಾಕಾಣೆ ಸ್ಥಳದಲ್ಲಿ ಹಂದಿಗೆ ಹಾಕಲಾಗುತ್ತಿದ್ದ ಆಹಾರವನ್ನು ತಿನ್ನಲು ಬಂದಿದ್ದ ಉಡವನ್ನು ಗಮನಿಸಿ, ಉರುಳು ಹಾಕಿ ಹಿಡಿದಿದ್ದಾನೆ.

ನಂತರ ಇದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖರೀದಿ ಮಾಡುವ ಗ್ರಾಹಕರ ಸೋಗಿನಲ್ಲಿ ಬಂದ ಅರಣ್ಯಾಧಿಕಾರಿಗಳು , 1.25 ಅಡಿ ಉದ್ದದ ಉಡವನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅರಣ್ಯ ಸಂಚಾರಿ ದಳದ ಡಿಸಿಎಫ್ ಪೂವಯ್ಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.