ETV Bharat / state

ಸಂಸದ ಪ್ರತಾಪ ಸಿಂಹ ಪುರೋಹಿತಶಾಹಿ, ಕಾರ್ಪೊರೇಟ್ ವಲಯದ ಪ್ರತಿನಿಧಿ : ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು - ಪ್ರತಾಪ ಸಿಂಹ ವಿರುದ್ಧ ಮಹೇಶ್ ಚಂದ್ರಗುರು ಹೇಳಿಕೆ

ರಾಮಕೃಷ್ಣ ಆಶ್ರಮದವರಿಗೆ ವಿವೇಕಾನಂದ ಸ್ಮಾರಕ ಆಧ್ಯಾತ್ಮಿಕ ಉದ್ದೇಶವಲ್ಲ, ಬದಲಾಗಿ ವಾಣಿಜ್ಯ ಮತ್ತು ಕಾಂಪ್ಲೆಕ್ಸ್ ಮಾಡಿ ಲಾಭದಾಯಕ ಮಾಡಿಕೊಂಡು ಸ್ವಾಮೀಜಿಗಳ ಹೊಟ್ಟೆ ತುಂಬಿಸುವ ಸಂಚು ಇದೆ‌..

ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು
ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು
author img

By

Published : Jul 3, 2021, 3:53 PM IST

ಮೈಸೂರು : ಸಂಸದ ಪ್ರತಾಪ ಸಿಂಹ ಪುರೋಹಿತಶಾಹಿ, ಕಾರ್ಪೊರೇಟ್ ವಲಯ, ವಾಣಿಜ್ಯ ವಲಯಗಳ ಪ್ರತಿನಿಧಿ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಟೀಕಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನ ಸಂಸ್ಕೃತಿಯನ್ನ ಸಂಸದ ಪ್ರತಾಪ ಸಿಂಹ ಅವರು ಪ್ರತಿನಿಧಿಸುತ್ತಿದ್ದರೆ, ಎಟಿಎಂಎಸ್ ಉಳಿಸಲು ಪ್ರಯತ್ನ ಮಾಡುತ್ತಿದ್ದರು. ಆದರೆ, ಅವರು ಮೈಸೂರಿನ ಇತಿಹಾಸ-ಸಂಸ್ಕೃತಿ ಪ್ರತಿನಿಧಿಸುತ್ತಿಲ್ಲ, ಅವರು ಕಾರ್ಪೊರೇಟ್, ವಾಣಿಜ್ಯ ವಲಯ ಹಾಗೂ ಪುರೋಹಿತ ಶಾಹಿಯನ್ನ ಪ್ರತಿನಿಧಿಸುತ್ತಿದ್ದಾರೆ. ಇತಿಹಾಸ ಇರುವಂತಹ ಎನ್​ಟಿಎಂಎಸ್ ಶಾಲೆ ಉಳಿಸಿ, ಮಕ್ಕಳು ಉದ್ದಾರ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ರಾಜಕೀಯ ಮುತ್ಸದಿ ಎಂದುಕೊಂಡಿದ್ದೆವು. ಆದರೆ, ಅವರು ಶಾಲೆಯು ವಿಚಾರದಲ್ಲಿ ಮುತ್ಸದಿತನ ತೋರುತ್ತಿಲ್ಲ. ಬದಲಾಗಿ ರಾಜಕೀಯ ಮಾತನಾಡುತ್ತಿದ್ದಾರೆ. ಇವರಿಗೆ ಇತಿಹಾಸ ಪ್ರಜ್ಞೆ ಇಲ್ಲ ಎಂದು ಹೇಳಿದರು.

ರಾಮಕೃಷ್ಣ ಆಶ್ರಮದವರಿಗೆ ವಿವೇಕಾನಂದ ಸ್ಮಾರಕ ಆಧ್ಯಾತ್ಮಿಕ ಉದ್ದೇಶವಲ್ಲ, ಬದಲಾಗಿ ವಾಣಿಜ್ಯ ಮತ್ತು ಕಾಂಪ್ಲೆಕ್ಸ್ ಮಾಡಿ ಲಾಭದಾಯಕ ಮಾಡಿಕೊಂಡು ಸ್ವಾಮೀಜಿಗಳ ಹೊಟ್ಟೆ ತುಂಬಿಸುವ ಸಂಚು ಇದೆ‌. ಜೆಎಸ್​ಎಸ್ ಮಠದಲ್ಲಿ ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್, ಪ್ರತಾಪ ಸಿಂಹ, ರಾಮಕೃಷ್ಣ ಆಶ್ರಮದವರು ಹಾಗೂ ಎನ್​ಟಿಎಂಎಸ್ ಶಾಲೆ ಉಳಿವಿಗಾಗಿ ಹೋರಾಟ ಮಾಡುತ್ತಿವವರು ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.