ETV Bharat / state

ಮಹಾರಾಜ ಟ್ರೋಫಿ​: ಹುಬ್ಬಳ್ಳಿ ಟೈಗರ್ಸ್‌ ಘರ್ಜನೆಗೆ ಬೆದರಿದ ಶಿವಮೊಗ್ಗ ಸ್ಟ್ರೈಕರ್ಸ್‌

ಮಹಾರಾಜ ಟ್ರೋಫಿ ಕ್ರಿಕೆಟ್​ ಟೂರ್ನಿಯ ಇಂದಿನ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 6 ವಿಕೆಟ್‌ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್‌ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿದೆ.

Etv Bharatmaharaj-cricket-tournament-shivamogga-strikers-beat-hubballi-tigers
Etv Bharatಮಹಾರಾಜ ಟ್ರೋಫಿ​: ಹುಬ್ಬಳ್ಳಿ ಟೈಗರ್ಸ್‌ ಘರ್ಜನೆಗೆ ಬೆದರಿದ ಶಿವಮೊಗ್ಗ ಸ್ಟ್ರೈಕರ್ಸ್‌
author img

By

Published : Aug 13, 2022, 7:59 PM IST

ಮೈಸೂರು: ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 6 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಮತ್ತೆ ಜಯದ ಲಯಕ್ಕೆ ಮರಳಿದೆ. 134 ರನ್‌ ಜಯದ ಗುರಿ ಬೆನ್ನತ್ತಿದ ಟೈಗರ್ಸ್‌ ಪರ ಮೊಹಮ್ಮದ ತಹಾ 49 ಎಸೆತಗಳಲ್ಲಿ ಅಜೇಯ 78 ರನ್‌ ಸಿಡಿಸಿ ಇನ್ನೂ 16 ಎಸೆತ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್‌ ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡವನ್ನು 133 ರನ್‌ಗೆ ಕಟ್ಟಿ ಹಾಕಿತು. ಕೃಷ್ಣಮೂರ್ತಿ ಸಿದ್ಧಾರ್ಥ್‌ (62*) ಮತ್ತು ಡಿ. ಅವಿನಾಶ್‌ (41) ಹೊರತುಪಡಿಸಿದರೆ ಉಳಿದ ಆಟಗಾರರು ಟೈಗರ್ಸ್‌ ಬೌಲಿಂಗ್‌ ದಾಳಿ ಎದುರಿಸುವಲ್ಲಿ ವಿಫಲರಾದರು.

ರೋಹನ್‌ ಕದಮ್‌, ಬಿ.ಆರ್‌. ಶರತ್‌ ಹಾಗೂ ನಾಯಕ ಕೃಷ್ಣಪ್ಪ ಗೌತಮ್‌ ತಲಾ 1, 3, 4 ರನ್​ ಗಳಿಸಿ ಪೆವಿಲಿಯನ್‌ ಹಾದಿ ಹಿಡಿದರು. ಇದರಿಂದ ಶಿವಮೊಗ್ಗ ರನ್‌ ಗಳಿಕೆ ನಿಧಾನವಾಯಿತು. ಟೈಗರ್ಸ್‌ ನಾಯಕ ಅಭಿಮನ್ಯು ಮಿಥುನ್‌ (20ಕ್ಕೆ 2) ಹಾಗೂ ವಾಸುಕಿ ಕೌಶಿಕ್‌ 25ಕ್ಕೆ 3 ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಶಿವಮೊಗ್ಗವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.

maharaj-cricket-tournament-shivamogga-strikers-beat-hubballi-tigers
ಮಹಾರಾಜ ಟ್ರೋಫಿ​ ಟೂರ್ನಿ

26 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಶಿವಮೊಗ್ಗಕ್ಕೆ ನೆರವಾಗಿದ್ದು, ಕೃಷ್ಣಮೂರ್ತಿ ಶರತ್‌ ಅವರ ಇನ್ನಿಂಗ್ಸ್‌. 53 ಎಸೆತಗಳನ್ನು ಎದುರಿಸಿದ ಶರತ್‌ 6 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ ಅಜೇಯ 62 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಇನ್ನೊಂದೆಡೆ ಡಿ. ಅವಿನಾಶ್‌ 36 ಎಸೆತಗಳಲ್ಲಿ 41 ರನ್‌ ಗಳಿಸಿ ಶರತ್‌ ಅವರಿಗೆ ಉತ್ತಮ ಬೆಂಬಲ ನೀಡಿದರು. ನಿನ್ನೆ 84 ರನ್‌ ಗಳಿಸಿ ವಿಶ್ವಾಸ ಮೂಡಿಸಿದ್ದ ರೋಹನ್‌ ಕದಮ್‌ ಇಂದು ಕೇವಲ 1 ರನ್​ಗೆ ಪೆವಿಲಿಯನ್‌ ಸೇರಿದ್ದು ಶಿವಮೊಗ್ಗ ತಂಡಕ್ಕೆ ಮತ್ತಷ್ಟು ಹಿನ್ನಡೆ ತಂದಿತು.

ಇದನ್ನೂ ಓದಿ: Ipl ತಂಡದ ಮಾಲೀಕರಿಂದ ಮೂರ್ನಾಲ್ಕು ಸಲ ಕಪಾಳಮೋಕ್ಷ.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಸ್ ಟೇಲರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.