ಮೈಸೂರು: ನಳಿನ್ ಕುಮಾರ್ ಕಟೀಲ್ ಒಬ್ಬ ಅಯೋಗ್ಯ, ಗ್ರೇಟ್ ಜೋಕರ್, ಅವಿವೇಕಿಗಳ ಹಾಗೂ ಹುಚ್ಚರ ಬ್ರಾಂಡ್ ಅಂಬಾಸಿಡರ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟರ್, ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಬಿಜೆಪಿ ಹೊಸದೊಂದು ಇತಿಹಾಸ ಸೃಷ್ಟಿಸಿದೆ. ವಿಷಯಾಧಾರಿತ ಚರ್ಚೆ ಬಿಟ್ಟು ವೈಯಕ್ತಿಕ ಟೀಕೆಗೆ ಮುಂದಾಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಒಬ್ಬ ಮುಟ್ಟಾಳ, ಗ್ರೇಟ್ ಜೋಕರ್, ಅವಿವೇಕಿಗಳ ಹಾಗೂ ಹುಚ್ಚರ ಬ್ರಾಂಡ್ ಅಂಬಾಸಿಡರ್. ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದ ವ್ಯಕ್ತಿ ಎಂದು ಎಂ. ಲಕ್ಷ್ಮಣ್ ಹರಿಹಾಯ್ದರು.
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಆಗಿದ್ದರೆ ನಿಮ್ಮಲ್ಲೇ ಎನ್ಸಿಬಿ ಇದೆ. ಐಟಿ, ಇಡಿ, ಸಿಬಿಐ ತನಿಖೆ ಮಾಡಿ ಆಮೇಲೆ ಆಧಾರದ ಮೇಲೆ ಆರೋಪ ಮಾಡಿ. ಆದರೆ, ಸುಖಾಸುಮ್ಮನೆ ಆರೋಪ ಮಾಡೋದು ಮುಟ್ಟಾಳತನ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಬೇಲ್ನಲ್ಲಿದ್ದಾರೆ ಎಂದು ಆರೋಪ ಮಾಡಿದ್ದೀರಿ. ಆದರೆ, ನಿಮ್ಮ ಪಕ್ಷದ ಗೃಹ ಮಂತ್ರಿ ಅಮಿತ್ ಶಾ ಜೈಲಿನಲ್ಲಿರಲಿಲ್ವಾ.? ಮಾಜಿ ಸಿಎಂ ಬಿಎಸ್ವೈ 29 ದಿನ ಜೈಲಿನಲ್ಲಿರಲಿಲ್ವಾ.? ಎಂದು ಪ್ರಶ್ನಿಸಿದರು.
ನಿಮ್ಮ ವಿಶ್ವಗುರು ಮೋದಿ 84 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಆರ್ಥಿಕತೆ, ಅಪೌಷ್ಟಿಕತೆ, ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಈ ವಿಷಯ ಕುರಿತು ಚರ್ಚೆ ಮಾಡಿ ಎಂದು ಹೇಳಿದರು.
ಓದಿ: ಈ ಚುನಾವಣೆ ಭಾಷಣಗಳನ್ನ ಮಾನ ಮಾರ್ಯಾದೆ ಇರುವವರು ಕೇಳಲಾಗುವುದಿಲ್ಲ: ವಾಟಾಳ್ ನಾಗರಾಜ್ ಸಿಡಿಮಿಡಿ